ನ್ಯೂಸ್

ಕಾರಿನಲ್ಲಿ ಮಹಿಳೆಯ ಶವ ಪತ್ತೆ; ಪೊಲೀಸರಿಗೆ ಆಕೆಯ ಪತಿಯ ಮೇಲೆ ಹತ್ಯೆ ಗುಮಾನಿ | Body Discovered

ಲಂಡನ್​​​: ಬ್ರಿಟನ್‌ನಲ್ಲಿ ಕಾರಿನೊಳಗೆ 24 ವರ್ಷದ ಭಾರತೀಯ ಮೂಲದ ಮಹಿಳೆಯ ಶವ(Body Discovered) ಪತ್ತೆಯಾಗಿದೆ. ಆಕೆಯ ಪತಿಯೂ ತಲೆಮರೆಸಿಕೊಂಡಿರುವುದರಿಂದ ಮಹಿಳೆಯನ್ನು ಆತನೆ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ಕಾರಣಕ್ಕೆ ಮಹಿಳೆಯ ಪತಿ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಈ ತಿಂಗಳ ಆರಂಭದಲ್ಲಿ ಘಟನೆ ನಡೆದಿದ್ದು ಇದುವರೆಗೂ ಮಹಿಳೆಯ ಗಂಡನ ಬಗ್ಗೆ ಏನೂ ತಿಳಿದುಬಂದಿಲ್ಲ. ಈತ ದೇಶ ಬಿಟ್ಟು ಪರಾರಿಯಾಗಿರಬಹುದು ಎಂದು ಪೊಲೀಸರ ಅಭಿಪ್ರಾಯವಾಗಿದೆ. ಕೆಲವು ದಿನಗಳ ಹಿಂದೆ, ಪೂರ್ವ ಲಂಡನ್‌ನ ಇಲ್ಫೋರ್ಡ್ ಪ್ರದೇಶದ ಬ್ರಿಸ್ಬೇನ್ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 24 ವರ್ಷದ ಹರ್ಷಿತಾ ಬ್ರೆಲಾ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದರು.

ಶವ ಪತ್ತೆಯಾದಾಗಿನಿಂದ ಮಹಿಳೆಯ ಭಾರತೀಯ ಮೂಲದ ಪತಿ ಪಂಕಜ್ ಲಂಬಾ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಪತಿಯೇ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು 60 ಮಂದಿ ಪತ್ತೆದಾರರ ತಂಡವನ್ನು ನಿಯೋಜಿಸಿದ್ದಾರೆ ಆದರೆ ಇದುವರೆಗೆ ಪಂಕಜ್ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಕಳೆದ ಗುರುವಾರ ಇಲ್ಫೋರ್ಡ್ ಪ್ರದೇಶದಲ್ಲಿ ಕಾರಿನ ಟ್ರಂಕ್‌ನಲ್ಲಿ ಹರ್ಷಿತಾ ಮೃತದೇಹ ಪತ್ತೆಯಾದಾಗ ಪೊಲೀಸರು ನಾಪತ್ತೆಯಾದ ಬಗ್ಗೆ ತನಿಖೆ ನಡೆಸುತ್ತಿದ್ದರು. ಪರಿಚಯಸ್ಥರೇ ಹರ್ಷಿತಾ ಮೇಲೆ ಹಲ್ಲೆ ನಡೆಸಿರುವುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಘಟನೆಯಿಂದ ಹರ್ಷಿತಾ ಅವರ ಪತಿಯೂ ನಾಪತ್ತೆಯಾಗಿರುವುದರಿಂದ ಅನುಮಾನವು ಆತನ ಮೇಲೆ ತಿರುಗಿದೆ. (ಏಜೆನ್ಸೀಸ್​​)