Accident: ಮೂರು ದಿನಗಳ ಮುಂಚೆಯೇ ಅಪಘಾತವಾದ ಕಾರಿನಲ್ಲಿ ಮೂವರ ಶವಗಳು ಪತ್ತೆಯಾದ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಜೂ.2ರಂದು ರಸ್ತೆಯಿಂದ ಕಾರು ನಾಲೆಗೆ ಉರುಳಿದೆ. ಇದನ್ನು ಯಾರು ಗಮನಿಸಿಲ್ಲ. ಮೂರು ದಿನಗಳ ಬಳಿಕ ಕೆಟ್ಟ ವಾಸನೆ ಬರುತ್ತಿದ್ದ ವಾಹನ ಚಾಲಕರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಕಸರಾ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಗವಿತ್ ತಿಳಿಸಿದ್ದಾರೆ.
''ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಭಾರತೀಯ ನ್ಯಾಯ ಸಂಹಿತಾ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಾವು ಮೃತದೇಹಗಳನ್ನು ಗುರುತಿಸಿದ್ದೇವೆ" ಎಂದು ಅಧಿಕಾರಿ ತಿಳಿಸಿದ್ದಾರೆ.