ನ್ಯೂಸ್

ಮಗುಚಿದ ದೋಣಿ; ನೂರಾರು ಮಂದಿ ನಾಪತ್ತೆ...

chandru

ಬಿಹಾರ: ಚುನಾವಣೆ ಜೋಶ್​ನಲ್ಲಿರುವ ಬಿಹಾರದಲ್ಲಿ ಬೆಳ್ಳಂಬೆಳಗ್ಗೆ ಒಂದು ದುರಂತ ಸಂಭವಿಸಿದ್ದು, ಆತಂಕದ ವಾತಾವರಣ ಉಂಟಾಗಿದೆ.

ಇಲ್ಲಿನ ಭಗಲ್ಪುರದ ನಾಗಾಚಿಯ ಪ್ರದೇಶದಲ್ಲಿ ನದಿಯಲ್ಲಿ ದೋಣಿಯೊಂದು ಮಗುಚಿದ್ದು, ಅದರಲ್ಲಿದ್ದ ನೂರಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ.

ಪೊಲೀಸ್ ಹಾಗೂ ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು ನೀರಲ್ಲಿ ಮುಳುಗಿರುವವರ ಪತ್ತೆ ಹಾಗೂ ರಕ್ಷಣೆ ನಿಟ್ಟಿನಲ್ಲಿ ತುರ್ತು ಕ್ರಮಗಳು ಜಾರಿಯಲ್ಲಿವೆ. (ಏಜೆನ್ಸೀಸ್​)