ನ್ಯೂಸ್

ಮಾರ್ಗಮಧ್ಯೆ ಮೂರ್ಛೆರೋಗಕ್ಕೆ ತುತ್ತಾಗಿ 9 ವಾಹನಗಳಿಗೆ ಡಿಕ್ಕಿ ಹೊಡೆದ BMTC ಬಸ್​ ಚಾಲಕ! ವಿಡಿಯೋ ವೈರಲ್...

ಬೆಂಗಳೂರು: ಬಸ್​ ಚಾಲನೆ ಮಾಡುತ್ತಿರುವಾಗಲೇ ಮಾರ್ಗಮಧ್ಯೆ ಬಿಎಂಟಿಸಿ (BMTC)ಬಸ್​ ಚಾಲಕನಿಗೆ ಮೂರ್ಛೆರೋಗ ಕಾಣಿಸಿಕೊಂಡ ಪರಿಣಾಮ ಬಸ್​ ನಿಯಂತ್ರಣ ತಪ್ಪಿ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದ ಆಘಾತಕಾರಿ ಘಟನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸೋಮವಾರ (ಅ.13) ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವರದಿಗಳ ಪ್ರಕಾರ, ಚಾಲಕನಿಗೆ ಇದ್ದಕ್ಕಿಂದತೆ ಮೂರ್ಛೆರೋಗ ಕಾಣಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಬಸ್​ ಚಲಿಸುತ್ತಲೇ ಇದ್ದುದರಿಂದ ಅದನ್ನು ನಿಯಂತ್ರಿಸಲು ಕಂಡಕ್ಟರ್​ ಹೆಣಗಾಡಿ ಕೊನೆಯದಾಗಿ ಆಕ್ಸಿಲರೇಟರ್ ಬಟನ್​ ಒತ್ತಿ ಗಾಡಿಯನ್ನು ನಿಲ್ಲಿಸಿದ್ದಾನೆ. ಈ ವೇಳೆಗಾಗಲೇ ಬಸ್​ ನಿಯಂತ್ರಣ ತಪ್ಪಿ 9 ವಾಹನಗಳಿಗೆ ಡಿಕ್ಕಿ ಹೊಡೆದಿದೆ ಎಂದು ಮಾಹಿತಿ ಬಂದಿದೆ.

ಇದನ್ನೂ ಓದಿ:ರಸ್ತೆಯಲ್ಲಿ ಭಯಾನಕ ಸ್ಟಂಟ್​! ವಿಡಿಯೋ ವೈರಲ್​ ಬೆನ್ನಲ್ಲೇ ಚಾಲಕನಿಗೆ ತಕ್ಕ ಪಾಠ ಕಲಿಸಿದ ಖಾಕಿ | Viral Video ಅಪಘಾತದ ಸಮಯದಲ್ಲಿ ಬಸ್​ನಲ್ಲಿ ಸುಮಾರು 15 ಪ್ರಯಾಣಿಕರಿದ್ದರು ಅವರಲ್ಲಿ ಯಾರಿಗೂ ಅಪಘಾತ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಆದರೆ ಎದುರು ಬರುತ್ತಿದ್ದ 3 ಆಟೋ ರಿಕ್ಷಾ, ಹಲವಾರು ದ್ವಿಚಕ್ರ ವಾಹನಗಳಿಗೆ ಗುದ್ದಿದ್ದು, ಆಟೋ ಹಾಗೂ ಅದರಲ್ಲಿದ್ದ ಒಬ್ಬ ಪ್ರಯಾಣಿಕನಿಗೆ ಗಾಯಗಳಾಗಿವೆ ಎಂದು ವರದಿ ಬಂದಿದೆ.

ಈ ಪ್ರಕರಣದ ಬಗ್ಗೆ ಮಾತನಾಡಿದ ಬಿಎಂಟಿಸಿ ಅಧಿಕಾರಿಗಳು ಚಾಲಕನ ಹಠಾತ್​ ಆರೋಗ್ಯ ಸ್ಥಿತಿಯೇ ರಸ್ತೆ ಅಪಘಾತಕ್ಕೆ ಕಾರಣವಾಗಿದೆ. ಇನ್ನು ಬಸ್​ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿಸಿದ್ದಾರೆ. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.

(ಏಜೆನ್ಸೀಸ್​)