ನ್ಯೂಸ್

ಬ್ಲಾಕ್​ಬಸ್ಟರ್​​ ಕಲ್ಕಿ 2898 AD ಒಟಿಟಿಯಲ್ಲಿ ಬಿಡುಗಡೆ; ಯಾವಾಗ ಸ್ಟ್ರೀಮಿಂಗ್​ ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​​

ಹೈದರಾಬಾದ್​​​: ನಾಗ್ ಅಶ್ವಿನ್​​ ನಿರ್ದೇಶನದ ಕಲ್ಕಿ 2898 AD ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ತನ್ನ ಭಾರೀ ಗಳಿಕೆಯೊಂದಿಗೆ ತನ್ನದೇ ಆದ ಛಾಪು ಮೂಡಿಸುತ್ತಿದೆ. ಇತ್ತೀಚೆಗೆ ವಿಶ್ವಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಟಿಕೆಟ್ ವಿಂಡೋದಲ್ಲಿ ಅನೇಕ ಹೊಸ ದಾಖಲೆಗಳನ್ನು ಸೃಷ್ಟಿಸಿದೆ. ಅಮಿತಾಭ್​​ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಮತ್ತು ಪ್ರಭಾಸ್ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ದಿಶಾ ಪಟಾನಿ, ಸಾಸ್ವತ್ ಚಟರ್ಜಿ ಮತ್ತು ಶೋಭನಾ ನಟಿಸಿದ್ದಾರೆ.

ಕಲ್ಕಿ 2898 AD ಸಿನಿಮಾ ಥಿಯೇಟರ್​ಗಳಲ್ಲಿ ಸೂಪರ್​ ಬ್ಲಾಕ್​ ಬಸ್ಟರ್​ ಹಿಟ್​​ ಆದ ಬಳಿಕ ಇನ್ನೆರಡು ವಾರಗಳಲ್ಲಿ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ವದಂತಿಗಳು ಹರಿದಾಡುತಿತ್ತು. ಅನೇಕರು ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದರು. ಕಲ್ಕಿ 2898 ಎಡಿ ಒಟಿಟಿ ಸ್ಟ್ರೀಮಿಂಗ್ ಕುರಿತ ಊಹಾಪೋಹಗಳಿಗೆ ಫುಲ್​ಸ್ಟಾಪ್​ ಹಾಕುವಂತೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ತಿಳಿಸಿದೆ.

ಅಂದಹಾಗೆ, ಕಲ್ಕಿ 2898 ಎಡು ತಂಡದ ಅಧಿಕೃತ ದೃಢೀಕರಣದ ಪ್ರಕಾರ, ಸಿನಿಮಾವು ಥಿಯೇಟರ್​ನಲ್ಲಿ ಬಿಡುಗಡೆಯಾದ 10 ವಾರಗಳ ನಂತರ ಡಿಜಿಟಲ್ ಪ್ಲಾಟ್​​ಫಾರ್ಮ್​​​ನಲ್ಲಿ ಬಿಡುಗಡೆಯಾಗುತ್ತದೆ. ಚಿತ್ರವು ಜೂನ್ 27 ರಂದು ಬಿಡುಗಡೆಯಾಯಿತು. 10 ವಾರಗಳ ನಂತರ ಅಂದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಡಿಜಿಟಲ್​​ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟ್ರೀಮಿಂಗ್ ಬಿಡುಗಡೆಯಾಗಲಿದೆ.

ಟಲ್ ಸ್ಟ್ರೀಮಿಂಗ್ ಆರಂಭದ ನಂತರ, ಕಲ್ಕಿ 2898 AD ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಆವೃತ್ತಿಯು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಸ್ಟ್ರೀಮಿಂಗ್ ಆಗುತ್ತವೆ. ಹಿಂದಿ ಆವೃತ್ತಿಯನ್ನು ನೆಟ್‌ಫ್ಲಿಕ್ಸ್ ಪಡೆದುಕೊಂಡಿದ್ದು ಇಂಗ್ಲಿಷ್ ಉಪಶೀರ್ಷಿಕೆಗಳೊಂದಿಗೆ ಸ್ಟ್ರೀಮ್ ಆಗಲಿದೆ.(ಏಜೆನ್ಸೀಸ್​​)