ವಾಷಿಂಗ್ಟನ್: ಕುರುಡರು ವಿಡಿಯೋವನ್ನು ಹೇಗೆ ನೋಡುತ್ತಾರೆ? ಅದರಲ್ಲೂ ಪೋರ್ನ್ ವಿಡಿಯೋಗಳನ್ನು ನೋಡೋದಾದರೂ ಹೇಗೆ? ಹೀಗೊಂದು ಪ್ರಶ್ನೆಗೆ ಇದೀಗ ಒಂದು ಸಂಸ್ಥೆ ಉತ್ತರ ಕಂಡುಹಿಡಿದಿದೆ. ಲೈವ್ ಪೋರ್ನ್ ವಿಡಿಯೋಗಳಿಗೆ ಲೈವ್ ಕಾಮೆಂಟ್ರಿ ಕೊಡಿಸುವ ಮೂಲಕ ಕುರುಡರಿಗೂ ಪೋರ್ನ್ ವಿಡಿಯೋ ನೋಡಿದ ಅನುಭವ ಮಾಡಿಸಿಕೊಡಲು ತಯಾರಿ ನಡೆದಿದೆ.
ಅಂದ ಹಾಗೆ ನಿಮಗೆ ರ್ಯಾಪರ್ ಸ್ನೂಪ್ ಡಾಗ್ ಬಗ್ಗೆ ಗೊತ್ತಿದೆಯೇ? ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಸಿಂಗ್ ಈಸ್ ಕಿಂಗ್ ಸಿನಿಮಾದಲ್ಲಿ ಟೈಟಲ್ ಸಾಂಗ್ ಹಾಡಿರುವ ಸ್ನೂಪ್ ಡಾಗ್ ತನ್ನ ರ್ಯಾಪಿಂಗ್ ಶೈಲಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದವರು. ಈ ರ್ಯಾಪರ್ ಇದೀಗ ಪೋರ್ನ್ ವಿಡಿಯೋಕ್ಕೆ ಲೈವ್ ಕಾಮೆಂಟ್ರಿ ಕೊಡಲು ಸಿದ್ಧರಾಗಿದ್ದಾರಂತೆ.
ಪೋರ್ನ್ ವಿಡಿಯೋಗಳನ್ನು ಲೈವ್ ಶೂಟ್ ಮಾಡಲಾಗುತ್ತಿರುತ್ತದೆ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ನೀವು ಲೈವ್ ಕಾಮೆಂಟ್ರಿಯಲ್ಲಿ ಹೇಳಬೇಕು. ಇದಕ್ಕೆ ನಿಮಗೆ ನಾವು 1 ಮಿಲಿಯನ್ ಡಾಲರ್ ಅಂದರೆ ಸರಿಸುಮಾರು 7 ಕೋಟಿ ರೂಪಾಯಿ ಸಂಭಾವನೆ ಕೊಡುತ್ತೇವೆ ಎಂದು ಅಮೆರಿಕದ ಸಂಸ್ಥೆಯೊಂದು ಸ್ನೂಪ್ ಅವರಿಗೆ ಪತ್ರ ಬರೆದಿದೆ.
ಸ್ನೂಪ್ ಅವರು ರ್ಯಾಪರ್ ಎನ್ನುವುದರ ಜತೆ ಒಳ್ಳೆಯ ಕಾಮೆಂಟರ್ ಕೂಡ ಹೌದು. ಈ ಹಿಂದೆ ಮೈಕ್ ಟೈಸನ್ ರಾಯ್ ಜೋನ್ಸ್ ಜೂನಿಯರ್ ಅವರ ಬಾಕ್ಸಿಂಗ್ಗೆ ಸ್ನೂಪ್ ಕಾಮೆಂಟ್ರಿ ಮಾಡಿದ್ದರು. ಹಾಸ್ಯಭರಿತವಾಗಿದ್ದ ಅವರ ಕಾಮೆಂಟ್ರಿಗೆ ಜನರು ಫಿದಾ ಆಗಿದ್ದರು. (ಏಜೆನ್ಸೀಸ್)