ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ರಾಜಕೀಯ ಪಕ್ಷಗಳ ನಡುವಿನ ವಾಗ್ದಾಳಿ ತೀವ್ರಗೊಂಡಿದೆ. ರ್ಯಾಲಿಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಿಜೆಪಿ(BJP) ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ಬಿಜೆಪಿಯು ಕೇಜ್ರಿವಾಲ್ ಅವರ ವಿರುದ್ಧವಾಗಿ ಉಚ್ಛಾಟನೆ ಮಾಡಬೇಕಾದ ಶೀಶ್ ಮಹಲ್ನ ಆಪ್ ದಾ ಎ ಅಜಮ್ ಎಂಬ ಪೋಸ್ಟರ್ ಮತ್ತು ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಇದನ್ನು ಓದಿ: ಸಿಎಂ ನಿವಾಸದಿಂದ ವಸ್ತಗಳನ್ನು ಹೊರ ಹಾಕಲಾಗಿದೆ; ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಅತಿಶಿ ಆರೋಪ | Chief Minister Atishi
ಜನಪ್ರಿಯ ಗಾಯಕ ಹನಿ ಸಿಂಗ್ ಅವರ 'ಲುಂಗಿ ಡ್ಯಾನ್ಸ್' ಹಾಡಿನ ಸ್ಪಿನ್ ಆಗಿರುವ "ಶೀಶ್ ಮಹಲ್ ಆಪ್ದಾ ಫೈಲಾನೆ ವಾಲೋನ್ ಕಾ ಅಡ್ಡಾ" ಹಾಡನ್ನು ಬಿಡುಗಡೆ ಮಾಡಿರುವ ಬಿಜೆಪಿ, ಕೇಜ್ರಿವಾಲ್ ಅವರ ಭ್ರಷ್ಟಾಚಾರ ಮತ್ತು ತೆರಿಗೆದಾರರ ಹಣದಿಂದ ಸಿದ್ಧಪಡಿಸಿದ “ಶೀಶ್ ಮಹಲ್” ಕಥೆಯನ್ನು ನಿರೂಪಿಸುತ್ತದೆ ಎಂದು ಹೇಳಿದೆ.
ಅಲ್ಲದೆ ವಿಡಿಯೋ ಜತೆಗೆ ‘ಆಪ್ದಾ-ಎ-ಆಜಮ್’ ಶೀರ್ಷಿಕೆಯ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಗಿದೆ. ಪೋಸ್ಟರ್‌ನಲ್ಲಿ ನೋಡಿದರೆ ಅರವಿಂದ್ ಕೇಜ್ರಿವಾಲ್ ಅವರ ಮುಖವು ಮೊಘಲ್ ದೊರೆಯಂತೆ ಕಾಣುವ ದೇಹಕ್ಕೆ ಮಾರ್ಫ್ ಮಾಡಿರುವುದನ್ನು ಕಾಣಬಹುದು. ಎಎಪಿ ನಾಯಕ ಭ್ರಷ್ಟಾಚಾರ ಮತ್ತು ದುರಾಡಳಿತ ನಡೆಸಿದ್ದಾರೆ ಎಂದು ಆರೋಪಿಸಿದೆ.
ಇದಕ್ಕೆ ಪ್ರತಿಕ್ರಿಯೆಯಾಗಿ ಎಎಪಿ, ಪ್ರಧಾನಿ ನರೇಂದ್ರ ಮೋದಿ ಅವರು ಬಳಸುತ್ತಿದ್ದ ನಿವಾಸ ಮತ್ತು ವಿಮಾನದ ವೆಚ್ಚವನ್ನು ಉಲ್ಲೇಖಿಸಿ ಬಿಜೆಪಿಗೆ ತಿರುಗೇಟು ನೀಡಿದೆ. ದೆಹಲಿಯ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ ಫೆಬ್ರವರಿ 5 ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಮತ ಎಣಿಕೆ ನಡೆಯಲಿದೆ.(ಏಜೆನ್ಸೀಸ್)