ಬೆಂಗಳೂರು: ಕಾಂಗ್ರೆಸ್ ಸರ್ಕಾರ(Congress Government) ಘೋಷಿಸಿದ ಗ್ಯಾರಂಟಿಗಳನ್ನು ಉಲ್ಲೇಖಿಸಿ ವ್ಯಂಗ್ಯವಾಡಿರುವ ರಾಜ್ಯ ಬಿಜೆಪಿ(BJP), ಸುರ್ಜೆವಾಲ ಅವರನ್ನು 'ಕಲೆಕ್ಷನ್ ಏಜೆಂಟ್' ಎಂದು ಟ್ವೀಟ್ ಮೂಲಕ ಕರೆದಿದೆ.
ಬಿಜೆಪಿ ಮಾಡಿರುವ ಟ್ವೀಟ್ ಹೀಗಿದೆ, "ಕಲೆಕ್ಷನ್ ಏಜೆಂಟ್ ಸುರ್ಜೆವಾಲ ಅವರ ಎಟಿಎಂ ಸರ್ಕಾರದ ಸುಳ್ಳು ಗ್ಯಾರಂಟಿಗಳು ಹೀಗಿವೆ.
ರಾಜ್ಯದ ಜನರ ಕಿವಿ ಮೇಲೆ ಹೂವು ಇಡ್ತೀವಿ ಅಂತ ಅಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ಚುನಾವಣೆಯ ಮೊದಲೇ ಅಣಕಿಸಿದ್ದರು! ಎಂದು ಟ್ವೀಟ್ ಮಾಡಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದೆ.