ನಾನೇ ದೇವರು ನೀನೇಕೆ ಚರ್ಚಿಗೆ ಹೋಗ್ತೀಯಾ ಎಂದು ಮಗನಿಂದ ತಾಯಿಗೆ ಅವಾಜ್​! ಚರ್ಚಿನ ವಸ್ತುಗಳು ಧ್ವಂಸ

Banasavadi Charch
Published on

ಬೆಂಗಳೂರು: ನಾನೇ ದೇವರು, ನೀನೇಕೆ ಚರ್ಚಿಗೆ ಹೋಗುತ್ತೀಯಾ ಎಂದು ತಾಯಿಗೆ ಅವಾಜ್​ ಹಾಕಿರುವ ಪುತ್ರನೊಬ್ಬ ಚರ್ಚಿ​ನಲ್ಲಿರುವ ವಸ್ತುಗಳನ್ನು ಧ್ವಂಸ ಮಾಡಿರುವ ಘಟನೆ ಬಾಣಸವಾಡಿ ಬಳಿಯಿರುವ ಕಮ್ಮನಹಳ್ಳಿಯಲ್ಲಿನ ಚರ್ಚಿನಲ್ಲಿ ನಡೆದಿದೆ.

ಕೇರಳ ಮೂಲದ ಟಾಮ್ ಮ್ಯಾಥ್ಯೂವ್ ಎಂಬಾತ ಈ ಉದ್ಧಟತನ ಮೆರೆದಿದ್ದಾನೆ. ಮನೆಯಲ್ಲಿಯೇ ದೇವರನ್ನು ಇಟ್ಟುಕೊಂಡು ಚರ್ಚಿಗೆ ಯಾಕೆ ಹೋಗ್ತೀಯಾ ಎಂದು ತನ್ನ ತಾಯಿಗೆ ಅವಾಜ್ ಹಾಕಿ, ಚರ್ಚಿನಲ್ಲಿದ್ದ ಹೂಕುಂಡ ಸೇರಿದಂತೆ ಅನೇಕ‌ ವಸ್ತುಗಳನ್ನು ಧ್ವಂಸ ಮಾಡಿದ್ದಾನೆ.

ಆರೋಪಿ ಮ್ಯಾಥ್ಯೂವ್​ 30 ವರ್ಷಗಳಿಂದ ಬೆಂಗಳೂರಿನಲ್ಲಿ ನಲೆಸಿದ್ದಾನೆ. ವಿದೇಶಗಳಲ್ಲಿಯು ಸಹ ಸಾಕಷ್ಟು ಓಡಾಟ ಮಾಡಿದ್ದಾನೆ. ನಿನ್ನೆ ಚರ್ಚಿಗೆ ಹೋದಾಗ ಈ ಗಲಾಟೆ ನಡೆದಿದೆ. ನಾನೇ ದೇವರು, ನೀವ್ಯಾಕೆ ಆ ದೇವರನ್ನು ಪೂಜಿಸುತ್ತೀರಾ ಎಂದು ಗಲಾಟೆ ಮಾಡಿದ್ದಾನೆ. ಸದ್ಯ ಮ್ಯಾಥ್ಯೂವ್​ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಮಾನಸಿಕ ಅಸ್ವಸ್ಥನಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಆತನ ತಾಯಿಯನ್ನೂ ವಿಚಾರಣೆ ಮಾಡುತ್ತಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net