Delhi CM:ರಾಷ್ಟ್ರ ರಾಜಧಾನಿಯಲ್ಲಿ 10 ವರ್ಷಗಳ ಕಾಲ ಗದ್ದುಗೆಯಲ್ಲಿದ್ದ ಆಮ್ ಆದ್ಮಿ ಪಾರ್ಟಿ(ಎಎಪಿ)ಯನ್ನು ಸೋಲಿಸುವ ಮೂಲಕ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಅಲ್ಲದೆ, ಮುಂದಿನ ಡೆಲ್ಲಿ ಸಿಎಂ ಎಂದೇ ಬಿಂಬಿವಾಗಿರುವ ಬಿಜೆಪಿ ಶಾಸಕ ಪರ್ವೇಶ್ ವರ್ಮ ಅವರು, ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿಯ ಮುಂದಿನ ಸಿಎಂ ‘ಶೀಶ್ ಮಹಲ್’ನಲ್ಲಿ ವಾಸಿಸುವುದಿಲ್ಲ; ಕಾರಣ ಏನು ಗೊತ್ತಾ? | New Delhi
ಇದೀಗ, ಭಾರತೀಯ ಜನತಾ ಪಾರ್ಟಿಯಲ್ಲಿ ದೆಹಲಿ ಸಿಎಂ ಸ್ಥಾನಕ್ಕೆ ಹಲವು ಶಾಸಕರು ಮತ್ತು ಶಾಸಕರಲ್ಲದ ಹೆಸರುಗಳು ಕೇಳಿಬರುತ್ತೀವೆ. ಇದರ ನಡುವೆ ಬಿಜೆಪಿಯಲ್ಲಿ ನಾಲ್ಕು ಮಹಿಳೆಯರು ಶಾಸಕರಾಗಿದ್ದಾರೆ. ಬಿಜೆಪಿ ಉನ್ನತ ಮೂಲಗಳ ಪ್ರಕಾರ, ಈ ಬಾರಿ ದೆಹಲಿ ಗದ್ದುಗೆಯಲ್ಲಿ ಮಹಿಳೆಯೊಬ್ಬರು ಸಿಎಂ ಆಗಲಿದ್ದಾರೆ ಎನ್ನುವ ಮಾಹಿತಿ ಹರಿದಾಡುತ್ತಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಪಶ್ಚಿಮ ದೆಹಲಿ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿರುವ ಮತ್ತು ಮಾಜಿ ಸಿಎಂ ಸಾಹಿಬ್ ಸಿಂಗ್ ವರ್ಮ ಅವರ ಪುತ್ರ ಈ ಪರ್ವೇಶ್ ವರ್ಮ, ಸಿಎಂ ರೇಸ್ನಲ್ಲಿ ಇತನ ಹೆಸರು ಮುಂಚೂಣಿಯಲ್ಲಿದೆ. ಇವರ ಜತೆ ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಮತ್ತು ನೂತನ ಶಾಸಕ ಸತೀಶ್ ಉಪಾಧ್ಯಾಯ, ಪಾರ್ಟಿ ಹಿರಿಯ ನಾಯಕ ವಿಜಯೇಂದರ್ ಗುಪ್ತಾ, ಶಾಸಕರಾದ ಅಶೀಶ್ ಸೂದ್ ಹಾಗೂ ಪವನ್ ಶರ್ಮ ಕೂಡ ಸಿಎಂ ರೇಸ್ನಲ್ಲಿದ್ದಾರೆ.
ಇದರ ನಡವೆ ಮಹಿಳಾ ಸಿಎಂ ಆಯ್ಕೆ ಕೂಡ ಪ್ರಸ್ತಾಪ ಆಗಿದ್ದು, ನೂತನವಾಗಿ ಆಯ್ಕೆಯಾಗಿರುವ 48 ಶಾಸಕರಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳಿಂದ ನೀಲಂ ಪಹಲ್ವಾನ್, ರೇಖಾ ಗುಪ್ತಾ, ಪೂನಂ ಶರ್ಮ ಮತ್ತು ಶಿಖಾ ರಾಯ್ ಸೇರಿ ನಾಲ್ಕು ಮಹಿಳಾ ಮಣಿಗಳು ಗೆದ್ದು ಬಿಗಿದ್ದಾರೆ. ಇನ್ನು ಬಿಜೆಪಿ ಮೂಲಗಳು ಪ್ರಕಾರ, ಸಿಎಂ ರೇಸ್ನಲ್ಲಿ ಜಾತಿ ಸಮೀಕರಣ ಪರಿಗಣಿಸಲಿದ್ದು, ಪರಿಶಿಷ್ಠ ಜಾತಿ ಸೇರಿದವರನ್ನು ಸಿಎಂ ಮಾಡಬಹುದು ಎಂದು ವರದಿ ಹೇಳುತ್ತೀವೆ. ಶಾಸಕರಾಗಿ ಆಯ್ಕೆಯಾಗಿರುವ ಈ ಎಲ್ಲ ಮಹಿಳೆಯರು ಕೂಡ ಪರಿಶಿಷ್ಠ ಜಾತಿಗೆ ಸೇರಿದವರು. ಹೀಗಾಗಿ, ಸಿಎಂ ಸ್ಥಾನಕ್ಕೆ ಮಹಿಳೆಯರನ್ನು ಪರಿಗಣಿಸಿದರೆ ಈ ನಾಲ್ಕರಲ್ಲಿ ಒಬ್ಬರನ್ನು ಪರಿಗಣಿಸಬಹುದು ಎಂದು ಹೇಳಲಾಗುತ್ತಿದೆ.
70 ವಿಧಾನಸಭಾ ಕ್ಷೇತ್ರಗಳ ಬಲಬಲ ಹೊಂದಿರುವ ದೆಹಲಿಯಲ್ಲಿ ಬಿಜೆಪಿ 48, ಎಎಪಿ 22 ಮತ್ತು ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿದೆ.