ನ್ಯೂಸ್

ಬಿಜೆಪಿ ಸಂಸದನ ಕಾರು ಅಡ್ಡಗಟ್ಟಿ, ಹಲ್ಲೆ ನಡೆಸಿದ ಟಿಆರ್​ಎಸ್​ ಕಾರ್ಯಕರ್ತರು...

ವಾರಂಗಲ್​: ತೆಲಂಗಾಣದ ನಿಜಾಮಾಬಾದ್​ನ ಸಂಸದ ಅರವಿಂದ್​ ಧರ್ಮಪುರಿ ಅವರ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್​ಎಸ್​) ಸದಸ್ಯರು ಹಲ್ಲೆ ನಡೆಸಿದ್ದಾರೆ.

ಆತ್ಮ ನಿರ್ಭರ ಭಾರತ್​ ಅಭಿಯಾನದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅರವಿಂದ್​ ಧರ್ಮಪುರಿ ಅವರ ವಾಹನವನ್ನು ಅಡ್ಡಗಟ್ಟಿದ ಟಿಆರ್​ಎಸ್​ ಕಾರ್ಯಕರ್ತರು, ಸಂಸದನ ಮೇಲೆ ಹಲ್ಲೆ ನಡೆಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಹೋದರೂ ಕೂಡ ಹಿಂದಿನಿಂದ ಬೆನ್ನಟ್ಟಿದ್ದಾರೆ.

ಟಿಆರ್​ಎಸ್​​ನಲ್ಲಿರುವ ಹಿಂದು ವಿರೋಧಿ ಸದಸ್ಯರು ನನ್ನ ಮೇಲೆ ಅಟ್ಯಾಕ್​ ಮಾಡಿದ್ದಾರೆ. ಹೈವೇದಲ್ಲಿ ನಮ್ಮ ವಾಹನವನ್ನು ಬೆನ್ನಟ್ಟಿ ಬಂದಿದ್ದಾರೆ. ಜನಪ್ರತಿನಿಧಿಗಳ ಮೇಲೆ ಹೀಗೆ ಹಾಡಹಗಲಲ್ಲೇ ದಾಳಿ ಆಗುತ್ತದೆ ಎಂದರೆ ಇದು ಮುಖ್ಯಮಂತ್ರಿ ಮತ್ತು ರಾಜ್ಯದ ಡಿಜಿಪಿ ತಲೆ ತಗ್ಗಿಸುವ ವಿಚಾರ ಎಂದು ಅರವಿಂದ್​ ಧರ್ಮಾಪುರಿ ಅವರು ಟ್ವೀಟ್​ ಮಾಡಿದ್ದಾರೆ. (ಏಜೆನ್ಸೀಸ್​)