ನ್ಯೂಸ್

ಸಂಸದ ಗೌತಮ್​ ಗಂಭೀರ್​ ತಂದೆಯ ಎಸ್​ಯುವಿ ಕಾರನ್ನೇ ಎಗರಿಸಿದ ಖದೀಮರು!

ನವದೆಹಲಿ: ಮನೆಯ ಹೊರಭಾಗದಲ್ಲಿ ಪಾರ್ಕ್​ ಮಾಡಿದ್ದ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್​ ಗಂಭೀರ್​ ತಂದೆಯ ಎಸ್​ಯುವಿ ಕಾರನ್ನು ಖದೀಮರು ದೋಚಿರುವ ಘಟನೆ ರಾಜಧಾನಿಯ ರಾಜೇಂದ್ರ ನಗರದಲ್ಲಿ ನಡೆದಿದೆ.

ಗುರುವಾರ ಬೆಳಗಿನ ಜಾವವೇ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಶೇಷ ತಂಡವನ್ನು ರಚಿಸಿ ಖದೀಮರ ಪತ್ತೆಗೆ ಬಲೆ ಬೀಸಿದ್ದಾರೆ.

ಖದೀಮರ ಪತ್ತೆಗಾಗಿ ಸ್ಥಳೀಯ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಲಾಗಿದೆ ಎಂದು ಕೇಂದ್ರ ಡಿಸಿಪಿ ತಿಳಿಸಿದ್ದಾರೆ. ಗೌತಮ್​ ಗಂಭೀರ್​ ತಂದೆಯೊಂದಿಗೆ ರಾಜೇಂದ್ರ ನಗರದ ನಿವಾಸದಲ್ಲೇ ವಾಸವಿದ್ದರು. (ಏಜೆನ್ಸೀಸ್​)