ನ್ಯೂಸ್

ಸರ್ಕಾರಿ ಅಧಿಕಾರಿಗೆ ಪಿಸ್ತೂಲ್​ ತೋರಿಸಿದ್ದ BJP ನಾಯಕನ MLA ಸ್ಥಾನ ರದ್ದು

20 ವರ್ಷಗಳ ಹಿಂದೆ(2003) ಸರ್ಕಾರಿ ಅಧಿಕಾರಿಗೆ ಪಿಸ್ತೂಲ್​ ತೋರಿಸಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಸ್ತಾನದ ಅಂತಾ ವಿಧಾನಸಭಾ ಕ್ಷೇತ್ರದ ಶಾಸಕ(MLA) ಕನ್ವರ್​ ಲಾಲ್​​ ಮೀನಾ ಅವರ ಎಂಎಲ್​ಎ ಸ್ಥಾನ ಶುಕ್ರವಾರ ರದ್ದಾಗಿದೆ.

ಕಾನೂನು ಸಲಹೆ ಮತ್ತು ಸುಪ್ರೀಂ ಕೋರ್ಟ್‌ನ ನಿರ್ಧಾರಗಳ ಆಧಾರದ ಮೇಲೆ ವಿಧಾನಸಭೆ ಸ್ಪೀಕರ್ ವಾಸುದೇವ್ ದೇವ್ನಾನಿ ಶಾಸಕ ಸ್ಥಾನವನ್ನು ರದ್ದು ಪಡಿಸಿದ್ದಾರೆ. ಅವರು ಹೊರಡಸಿರುವ ಆದೇಶದಲ್ಲಿ ಮೇ.1 ರಿಂದ ಕನ್ವರ್ ಅವರ ಶಾಸಕ ಸ್ಥಾನ ರದ್ದಾಗಿದೆ ಎಂದು ವರದಿಯಾಗಿದೆ.

ಸರ್ಕಾರಿ ಅಧಿಕಾರಿಗೆ ಪಿಸ್ತೂಲ್​​ ತೋರಿಸಿದ್ದ ಕನ್ವರ್​

ಸರ್ಕಾರಿ ಅಧಿಕಾರಿಗೆ ಪಿಸ್ತೂಲ್​ ತೋರಿಸಿ ಬೆದರಿಕೆ ಹಾಕಿ ಸರ್ಕಾರಿ ಆಸ್ತಿ-ಪಾಸ್ತಿ ಹಾನಿ ಮಾಡಿದ್ದಾರೆ ಎಂದು ಕನ್ವರ್​ ಲಾಲ್​ ಮೀನಾ ವಿರುದ್ಧ 2003ರಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020ರ ಡಿಸೆಂಬರ್​ನಲ್ಲಿ ಜಲವಾರ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆಯ ಕುರಿತು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿದ್ದರು. ಸುಪ್ರೀಂಕೋರ್ಟ್​ ಕೂಡ ಜಲವಾರ ನ್ಯಾಯಾಲಯದ ತೀರ್ಪು ಎತ್ತಿಹಿಡಿದಿದೆ. ಈ ಹಿನ್ನೆಲೆ ಇದೇ ಮೇ.21ರಂದು ಜೈಲಿಗೆ ಶರಣಾಗಿದ್ದರು. ಇದೀಗ ಕನ್ವರ್​ ಲಾಲ್​ ಸದ್ಯ ಜೈಲಿನಲ್ಲಿದ್ದಾರೆ.(ಏಜೆನ್ಸೀಸ್​)