ಲಖನೌ: ನಾಟಕೀಯ ಬೆಳವಣಿಗೆಯಲ್ಲಿ ಬಿಜೆಪಿ ಶಾಸಕನಿಗೆ (BJP MLA) ವಕೀಲರೊಬ್ಬರು (Advocate) ಸಾರ್ವಜನಿಕರೆದುರೇ ಕಪಾಳಮೋಕ್ಷ (Slap) ಮಾಡಿರುವ ಘಟನೆ ಉತ್ತರಪ್ರದೇಶದ (UttarPradesh) ಲಖೀಂಪುರ್ಖೇರಿಯಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Video Viral) ಆಗಿದೆ.
ಘಟನೆ ಸಂಬಂಧ ಪೊಲೀಸರು ವಕೀಲ ಅವಧೇಶ್ ಸಿಂಗ್ (Awadhesh Singh) ಎಂದು ಗುರುತಿಸಲಾಗಿದ್ದು, ಇವರು ಸ್ಥಳೀಯ ವಕೀಲರ ಸಂಘದ ಅಧ್ಯಕ್ಷರೆಂದು ತಿಳಿದು ಬಂದಿದೆ. ಮುಂಬರುವ ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೂ (Urban Cooperative Bank management committee election) ಮುನ್ನ ಈ ಘಟನೆ ನಡೆದಿದ್ದು, ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ಇದನ್ನೂ ಓದಿ: ನೀವಿಲ್ಲ ಎಂಬ ವಿಚಾರವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ; ರತನ್ ಟಾಟಾ ನಿಧನಕ್ಕೆ ಕಂಬನಿ ಮಿಡಿದ Ex Girlfriend
ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ಪೊಲೀಸ್ ಭದ್ರತೆಯಲ್ಲಿ ಬಿಜೆಪಿ ಶಾಸಕ (BJP MLA) ಯೋಗೇಶ್ ವರ್ಮಾ (Yogesh Verma) ಬರುತ್ತಿದ್ದು, ಇದನ್ನು ನೋಡಿದ ವಕೀಲ ಅವಧೇಶ್ ಸಿಂಗ್ (Advocate Awadhesh Singh) ಏಕಾಏಕಿ ಅವರ ಕಪಾಳಕ್ಕೆ ಹೊಡೆಯುತ್ತಾರೆ. ಕೂಡಲೇ ಮಧ್ಯಪ್ರವೇಶಿಸುವ ಪೊಲೀಸರು (Police) ವಕೀಲನನ್ನು ಅರೆಸ್ಟ್ ಮಾಡುತ್ತಾರೆ. ಈ ವೇಳೆ ಮಧ್ಯಪ್ರವೇಶಿಸುವ ಶಾಸಕರ ಬೆಂಬಲಿಗರು ತಪ್ಪಾಗಿ ಅರ್ಥೈಸಿಕೊಂಡು ಮೊದಲಿಗೆ ಯೋಗೇಶ್ ವರ್ಮಾರನ್ನು ಹಿಗ್ಗಾಮುಗ್ಗಾ ಥಳಿಸುತ್ತಾರೆ (Assault). ಆ ಬಳಿಕ ಪೊಲೀಸರ ವಶದಲ್ಲಿರುವ ವಕೀಲನನ್ನು ಹಿಡಿದು ಥಳಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾ SDM ಸಂಜಯ್ ಸಿಂಗ್, ಯಾವ ಕಾರಣಕ್ಕೆ ಹಲ್ಲೆ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಅರ್ಬನ್ ಕೋಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿಯ ಚುನಾವಣೆ ಮುಂದೂಡುವಂತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುನೀಲ್ ಸಿಂಗ್ ಹಾಗೂ ಶಾಸಕ ಯೋಗೇಶ್ ವರ್ಮಾ ಪತ್ರ ಬರೆದಿದ್ದರು. ಆದರೆ, ನಿಗದಿಯಾಗಿರುವಂತೆ ಅಕ್ಟೋಬರ್ 14ರಂದು ಚುನಾವಣೆ ನಡೆಯಲಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಚುನಾವಣೆ ವಿಚಾರವಾಗಿ ಹಲ್ಲೆ ನಡೆದಿರಬಹುದು ಎಂದು ಜಿಲ್ಲಾ SDM ಸಂಜಯ್ ಸಿಂಗ್ ತಿಳಿಸಿದ್ದಾರೆ.