ಲಖನೌ: ಸರ್ಕಾರ ತಮ್ಮದೇ ಇದೆ, ಏನು ಮಾಡಿದರೂ ಅರಗಿಸಿಕೊಳ್ಳಬಹುದೆಂಬ ಬಿಜೆಪಿ ಶಾಸಕನ ಲೆಕ್ಕಾಚಾರ ತಪ್ಪಿಹೋಗಿದೆ. ಕೋರ್ಟ್ಗೆ ಹಾಜರಾಗಬೇಕಾಗಿದ್ದ ಶಾಸಕ, ಕೋವಿಡ್ 19 ಫೇಕ್ ರಿಪೋರ್ಟ್ ಸಲ್ಲಿಸಿ ಇದೀಗ ಪೇಚಿಗೆ ಸಿಲುಕಿದ್ದಾರೆ.
ಮೆಂಹದಾವಲ್ ಕ್ಷೇತ್ರದ ಶಾಸಕ ರಾಕೇಶ್ ಸಿಂಗ್ ಬಘೇಲ್ ಆರೋಪಿ. ಇದೀಗ ಶಾಸಕ ಬಘೇಲ್ ಜತೆಗೆ ನಕಲಿ ವರದಿ ಕೊಟ್ಟ ಸಂತ ಕಬೀರ್ನಗರದ ಚೀಫ್ ಮೆಡಿಕಲ್ ಆಫೀಸರ್ ಡಾಕ್ಟರ್ ಹರಗೋವಿಂದ್ ಸಿಂಗ್ ವಿರುದ್ಧವೂ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಶಾಸಕ ಬಘೇಲ್ 2010ರಲ್ಲಿ ನಡೆದ ಕೊಲೆಯತ್ನ ಮತ್ತು ಸಾರ್ವಜನಿಕ ಆಸ್ತಿಪಾಸ್ತಿ ಪ್ರಕರಣಕ್ಕೆ ಸಂಬಂಧಿಸಿ ಎಂಪಿ/ಎಂಎಲ್ಎ ಕೋರ್ಟ್ಗೆ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದರೆ, ಶಾಸಕ ಬಘೇಲ್ ಅತಿಬುದ್ಧಿವಂತಿಕೆ ಪ್ರದರ್ಶಿಸಿ ಫೇಕ್ ಕೋವಿಡ್ 19 ರಿಪೋರ್ಟ್ ಅನ್ನು ಕೋರ್ಟಿಗೆ ಸಲ್ಲಿಸಿದ್ದರು. ಹೆಚ್ಚುವರಿ ಸೆಷನ್ಸ್ ಜಡ್ಜ್ ದೀಪಂತ್ ಮಣಿ ಸಮನ್ಸ್ ಜಾರಿಗೊಳಿಸಿದ್ದರು.
ಇದನ್ನೂ ಓದಿ: ದೇವಸ್ಥಾನದ ಮೇಲೆ ದಾಳಿ ನಡೆಸೋದಕ್ಕೆ ಸಿದ್ಧರಾಗಿದ್ರು ಉಗ್ರರು!: ಪಾಕಿಸ್ತಾನದಿಂದ ಕರೆ ಕೂಡ ಬಂದಿತ್ತು ಅವರಿಗೆ!
ಶಾಸಕ ಬಘೇಲ್ ಇದೇ ಮೊದಲ ಬಾರಿ 2017 ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದವರು. ಲಖನೌನ್ ಗೋಮತಿ ನಗರದ ನಿವಾಸಿ. ಇದೀಗ ಶಾಸಕ ಬಘೇಲ್ ಮತ್ತು ಸಿಎಂಒ ವಿರುದ್ಧ ಪೋರ್ಜರಿ ಕೇಸ್ ದಾಖಲಾಗಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..