ನ್ಯೂಸ್

ಮನೆಯಲ್ಲಿರುವ ಗೂಂಡಾಗಳಿಗೆ ಬುದ್ಧಿ ಹೇಳಿ; ನನ್ನ ಕ್ಷೇತ್ರದಲ್ಲಿ ಮತೀಯ ಗಲಾಟೆಗೆ ಅವಕಾಶವಿಲ್ಲ ಎಂದ ಬಿಜೆಪಿ ಶಾಸಕ

Bengaluru - General - Rama Kishan K V

ಬೆಳಗಾವಿ: ನಿಮ್ಮ ಮನೆಯಲ್ಲಿರುವ ಮಕ್ಕಳು, ಗೂಂಡಾಗಳಿಗೆ ಬುದ್ಧಿ ಹೇಳಿ. ಸಮಾಜದಲ್ಲಿ ಗಲಭೆಗೆ ಕುಮ್ಮಕ್ಕು ನೀಡಿ, ಪ್ರಚೋದನೆ ನೀಡಿದವರು ಎಷ್ಟೇ ಪ್ರಭಾವಿ ಇದ್ದರೂ ಬಿಡುವುದಿಲ್ಲ. ಆರೋಪಿಗಳ ವಿರುದ್ಧ ಗೂಂಡಾ ಕೇಸ್​ ಹಾಕುಲು ಪೊಲೀಸರಿಗೆ ಸೂಚನೆ ನೀಡುತ್ತೇನೆ ಎಂದು ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಶ್ರೀರಾಮ ಸೇನೆ ಕಾರ್ಯಕರ್ತ ಸೇರಿ ಇಬ್ಬರಿಗೆ ಚಾಕು ಇರಿತ ಪ್ರಕರಣ ನಡೆದಿತ್ತು. ಈ ವಿಚಾರವಾಗಿ ಶಾಸಕ ಮಹಾದೇವಪ್ಪ ಮಾತನಾಡಿ, ಮನೆಯಲ್ಲಿ ಬುದ್ಧಿ ಹೇಳದೇ ಇದ್ದರೆ ರಾಮದುರ್ಗದಲ್ಲಿ ಮುಂದೆ ಬೇರೆಯದೇ ನಡೆಯುತ್ತದೆ. ನಾನು ಶಾಸಕನಾದ ಅವಧಿಯಲ್ಲಿ ಒಮ್ಮೆಯೂ ಹಿಂದೂ ಮುಸ್ಲಿಂ ಗಲಭೆಯಾಗಲು ಅವಕಾಶ ಕೊಟ್ಟಿಲ್ಲ.

ರಾಮದುರ್ಗ ಕ್ಷೇತ್ರದಲ್ಲಿ ಈವರೆಗೆ ಹಿಂದೂ ಮುಸ್ಲಿಂ ಮಧ್ಯೆ ಒಂದೂ ಗಲಭೆ ಆಗಿಲ್ಲ. ಇಂದು ಮುಸ್ಲಿಮರ ದೊಡ್ಡ ಹಬ್ಬ. ಹಿಂದೂಗಳಿಗೆ ಭೂದೇವಿಗೆ ಚರಗ ಚೆಲ್ಲುವ ಶೀಗಿ ಹುಣ್ಣಿಮೆ ಹಬ್ಬ. ಇದೆ ದಿನವೇ ಇಂಥ ಘಟನೆ ನಡೆದಿರುವುದನ್ನು ನಾನು ಖಂಡನೆ ಮಾಡುತ್ತೇನೆ.ಕಿಡಿಗೇಡಿಗಳನ್ನು ಹದ್ದು ಬಸ್ತಿನಲ್ಲಿಡಲು ಗೃಹಸಚಿವರು, ಮುಖ್ಯಮಂತ್ರಿಗೆ ಮನವರಿಕೆ ಮಾಡುತ್ತೇನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ.