ನ್ಯೂಸ್

ರಾತ್ರಿಯಿಡೀ ಕಾಮಗಾರಿ ಸ್ಥಳದಲ್ಲೇ ಮಲಗಿದ ಶ್ರೀರಾಮುಲು; ಕೆಲ್ಸ ಮುಗಿಸೋವರೆಗೂ ನದಿ ದಂಡೆಯಲ್ಲೇ ಠಿಕಾಣಿ

ಬಳ್ಳಾರಿ: ವೇದಾವತಿ ನದಿ ಸೇತುವೆ ದುರಸ್ತಿ ಕಾಮಗಾರಿ ವಿಳಂಬವಾದ ಹಿನ್ನೆಲೆ ದುರಸ್ತಿ ಸ್ಥಳದಲ್ಲೇ ಸಚಿವ ಶ್ರೀ ರಾಮುಲು ವಾಸ್ತವ್ಯ ಹೂಡಿದ ಘಟನೆ ಬಳ್ಳಾರಿ ತಾಲೂಕಿನ ಪಿಡಿಹಳ್ಳಿ ಬಳ್ಳಿ ನಡೆದಿದೆ.

ಇಲ್ಲಿನ ವೇದಾವತಿ ನದಿ ಸೇತುವೆಯ ಪಿಲ್ಲರ್​ನ ದುರಸ್ತಿ ಕಾರ್ಯ ನಡಿಯುತ್ತಿದೆ. ಈ ಕಾಮಗಾರಿ ಪೂರ್ಣಗೊಳ್ಳುವವರೆಗೂ ಕಾಲುವೆಗಳಿಗೆ ನೀರು ಹರಿಯುವುದನ್ನು ಅಧಿಕಾರಿಗಳು ಬಂದ್​​ ಮಾಡಿದ್ದಾರೆ. ಇದರ ಪರಿಣಾಮ ರೈತರು ತಮ್ಮ ಲಕ್ಷಾಂತರ ಎಕರೆ ಬೆಳೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಹಿನ್ನಲೆ ಸಚಿವ ಶ್ರೀ ರಾಮುಲು ನ.1 ರಂದು ದುರಸ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಈ ವೇಳೆ ನಿರ್ಮಾಣ ಕಾರ್ಯ ವಿಳಂಬವಾಗುತ್ತಿರುವುದನ್ನು ಗಮನಿಸಿದ ಸಚಿವ, ನಿನ್ನೆಯಿಂದ ಕಾಮಗಾರಿ ಸ್ಥಳದಲ್ಲೇ ತಮ್ಮ ವಾಸ್ತವ್ಯ ಹೂಡಿದ್ದಾರೆ. ಸಚಿವರು ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೂ ಕಾಮಗಾರಿ ಸ್ಥಳದಲ್ಲೇ ಇರಬೇಕೆಂದು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇದಲ್ಲದೇ ಸಚಿವರು ನ.1ರ ರಾತ್ರಿಯ ಊಟವನ್ನು ಮುಗಿಸಿ ಕಾಲುವೆ ಬಳಿಯೇ ಮಲಗಿದ್ದರು. ಮರುದಿನ ಬೆಳಗ್ಗೆ ನದಿ ನೀರಿನಲ್ಲಿ ಸ್ನಾನ ಮಾಡಿದ್ದಾರೆ.