ಕಾರವಾರ: ಪ್ರಧಾನಿ ನರೇಂದ್ರ ಮೋದಿಯವರು ಮೇ 3ಕ್ಕೆ ಕ್ಷೇತ್ರದ ಅಂಕೋಲಾ ತಾಲೂಕಿನ ಹಟ್ಟಿಕೇರಿಗೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ಆಗಮಿಸುತ್ತಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶಾಸಕಿ ರೂಪಾಲಿ ನಾಯ್ಕ ಪೂಜೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Congress Manifesto 2023: ಬಿಜೆಪಿ ಜಾರಿಗೆ ತಂದ ಕಾನೂನುಗಳು ಒಂದು ವರ್ಷದೊಳಗೆ ರದ್ದು , ಭಜರಂಗದಳ ನಿಷೇಧ!
ವಿಘ್ನ ವಿನಾಶಕ, ಕಾರವಾರ ತಾಲೂಕಿನ ಅಮದಳ್ಳಿಯ ವೀರಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿರುವ ಶಾಸಕಿಯೂ ಆಗಿರುವ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ, ಕಾರ್ಯಕ್ರಮಕ್ಕೆ ಯಾವುದೇ ವಿಘ್ನ ಬಾರದಂತೆ ಯಶಸ್ವಿಯಾಗಿ ನೆರವೇರಲೆಂದು ಗಣಹೋಮ ನಡೆಸಿದ್ದಾರೆ.
108 ತೆಂಗಿನಕಾಯಿ ಗಣಹೋಮ ಪೂಜೆ :
ವೀರಗಣಪತಿ ದೇಗುಲದಲ್ಲಿ ಪುತ್ರ ಪರ್ಭತ್, ಸೊಸೆ ರೇಖಾ ಅವರೊಂದಿಗೆ ಸೇರಿ 108 ಕಾಯಿಯ ಗಣಹೋಮ ನಡೆಸಿದ್ದಾರೆ. ದೇಗುಲದ ಪ್ರಧಾನ ಅರ್ಚಕ ಮಹಾಬಲೇಶ್ವರ ಹಾಗೂ ಮಧುಕೇಶ್ವರ ಭಟ್ ಅವರ ಅರ್ಚಕತ್ವದಲ್ಲಿ ಬೆಳಿಗ್ಗೆಯಿಂದ ಗಣಹೋಮ ನಡೆಯುತ್ತಿದೆ.