ನ್ಯೂಸ್

ಇನ್ನೂ ಎಂಥೆಂಥ ವಿಲಕ್ಷಣ ಫೇಸ್​​ಮಾಸ್ಕ್​ಗಳು ಬರುತ್ತವೋ...

sspmiracle1982

ನವದೆಹಲಿ: ಲಾಕ್​ಡೌನ್​ನಿಂದಾಗಿ ಜೀವನಶೈಲಿಯೇ ಬದಲಾಗುತ್ತಿದೆ. ಮಾಸ್ಕ್​, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯಂತಹ ಹೊಸ ಸಾಮಾಜಿಕ ನಿಯಮಾವಳಿಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಇದೆ.

ಕರೋನವೈರಸ್ ಹರಡುವುದನ್ನು ತಡೆಗಟ್ಟಲು ಫೇಸ್ ಮಾಸ್ಕ್ ಅವಶ್ಯಕವಾಗಿದೆ. ಮನೆಯಿಂದ ಹೊರಗೆ ಹೊಗುವ ಪ್ರತಿಯೊಬ್ಬರೂ ತಮ್ಮನ್ನು ಮತ್ತು ಇತರರನ್ನು ಸುರಕ್ಷಿತವಾಗಿಡಲು ಮಾಸ್ಕ್ ಧರಿಸುತ್ತಾರೆ.

ಆದಾಗ್ಯೂ, ಜನರು ಮಾಸ್ಕ್​ ಎಂಬುದರ ಪರಿಕಲ್ಪನೆಯನ್ನೇ ವಿಲಕ್ಷಣವಾಗಿ ಬಿತ್ತರಿಸುತ್ತಿದ್ದಾರೆ. ಮಾಸ್ಕ್​​ನ್ನು ಬೇರೆ ವಸ್ತುಗಳೊಂದಿಗೆ ಅಥವಾ ತಮ್ಮಿಷ್ಟ ಬಂದ ವಸ್ತುವಿನಂತೆ ಬದಲಾಯಿಸಿಕೊಂಡ ಉದಾಹರಣೆಗಳಿವೆ. ಇವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಕೋವಿಡ್ ಐದು ತಿಂಗಳ ಹಿಂದೆ ತ್ವರಿತ ದರದಲ್ಲಿ ಹರಡುತ್ತಿದ್ದಂತೆ ಮಾಸ್ಕ್​​​ ಕೊರತೆಯುಂಟಾಗಿತ್ತು. ಪರಿಣಾಮವಾಗಿ, ಅಂಗಡಿಗಳಲ್ಲೂ ಇವು ಲಭ್ಯವಿಲ್ಲದಂತಾದಾಗ ಜಗತ್ತಿನಾದ್ಯಂತ ಅನೇಕರು ಮನೆಯಲ್ಲೇ ತಯಾರಿಸಿದ ಮಾಸ್ಕ್ ಬಳಸುತ್ತಿದ್ದಾರೆ.

ಆದರೆ ಅತ್ಯಂತ ವಿಲಕ್ಷಣವಾದ ಸಂಗತಿ ಬಿಂಬಿಸುವಂತಹ ಮಾಸ್ಕ್​​ಗಳನ್ನು ತಯಾರಿಸುವ/ ಧರಿಸುವ ಮೂಲಕ ನಿಯಮಗಳನ್ನು ಮೀರುವ ವ್ಯಕ್ತಿಗಳೂ ಇದ್ದಾರೆ.

ತೀರ ಇತ್ತೀಚೆಗಷ್ಟೇ ಮಾಸ್ಕ್ ಧರಿಸದ ಕಾರಣ ಪೋಸ್ಟ್ ಆಫೀಸ್‌ನಲ್ಲಿ ಸೇವೆ ನಿರಾಕರಿಸಿದ ನಂತರ ಮಹಿಳೆಯೊಬ್ಬರು ಮುಖ ಮುಚ್ಚಿಕೊಳ್ಳಲು ಒಳ ಉಡುಪನ್ನು ಬಳಸಿದರು. ಅದಕ್ಕೂ ಮೊದಲು, ಮಹಿಳೆಯೊಬ್ಬಳು ಶಾಪಿಂಗ್ ನಲ್ಲಿದ್ದಾಗ ರಕ್ಷಣೆಗಾಗಿ ಬುಜ್ ಲೈಟ್​​​ಯಿರ್ ಹೆಲ್ಮೆಟ್ ಧರಿಸಿದ್ದಳು.

ತೀರಾ ಇತ್ತೀಚೆಗೆ, ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಮಹಿಳೆಯೊಬ್ಬಳು ಮೂಗು ಮತ್ತು ಬಾಯಿಯನ್ನು ರಟ್ಟಿನಿಂದ ಮಾಡಿದ ಕೆಎಫ್‌ಸಿ ಬಾಕ್ಸ್​​​ನಿಂದ ಮುಚ್ಚಿಕೊಂಡಿದ್ದಾಳೆ. ಓಕ್ಲ್ಯಾಂಡ್ಸ್ ಪಾರ್ಕ್​​​ನ ಶಾಪಿಂಗ್ ಮಾಲ್ ನಲ್ಲಿ ವಿಲಕ್ಷಣ ದೃಶ್ಯ ಕಂಡುಬಂದಿದೆ.

ಈ ಸಣ್ಣ ದೃಶ್ಯಾವಳಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ:

ಕೆಳಗೆ ತೆರೆದುಕೊಂಡಿರುವ ಕೆಎಫ್‌ಸಿ ಬಾಕ್ಸ್ ಮಹಿಳೆಗೆ ತನ್ನ ತಲೆಯನ್ನು ಸೇರಿಸಲು ಅನುಕೂಲವಾಗಿದೆ. ಇನ್ನೂ ಆಶ್ಚರ್ಯವೆಂದರೆ, ಇದು ಅವಳಿಗೆ ಯಾವುದೇ ಕಿರಿಕಿರಿ ಎನಿಸದೆ ಸರಿ ಹೊಂದಿದೆಯಂತೆ. ದೃಶ್ಯ ವೈರಲ್ ಆಗುತ್ತಿದ್ದಂತೆ, ಭಾರೀ ಕಮೆಂಟ್​​ಗಳು ಶುರುವಾಗಿವೆ. ಫೇಸ್ ಮಾಸ್ಕ್‌ ಗೆ ಬದಲಾಗಿ ಕಾಣಿಸಿಕೊಳ್ಳುತ್ತಿರುವ ವಸ್ತುಗಳು ತೀರಾ ಚರ್ಚೆಗೆ ಗ್ರಾಸವಾಗುತ್ತಿವೆ.

ಪ್ರಯಾಣಿಕನೊಬ್ಬ ತಲೆಯ ಮೇಲೆ ಪ್ಲಾಸ್ಟಿಕ್ ನೀರಿನ ಬಾಟಲಿಯನ್ನು ಹಾಕಿಕೊಂಡಿರುವುದು ಸಹ ಪ್ರಯಾಣಿಕರ ಗಮನ ಸೆಳೆದಿತ್ತು.