More

    ರಾಜ್ಯದಲ್ಲಿ ಎತ್ತ ಸಾಗುತ್ತಿದೆ ಕೋವಿಡ್? ಭರವಸೆ ಮೂಡಿಸದ ಅಂಕಿ-ಸಂಖ್ಯೆಗಳು; ಇಂದೆಷ್ಟು ಜನರಿಗೆ ಸೋಂಕು?

    ರಾಜ್ಯದಲ್ಲಿ ಎತ್ತ ಸಾಗುತ್ತಿದೆ ಕೋವಿಡ್? ಭರವಸೆ ಮೂಡಿಸದ ಅಂಕಿ-ಸಂಖ್ಯೆಗಳು; ಇಂದೆಷ್ಟು ಜನರಿಗೆ ಸೋಂಕು?ಬೆಂಗಳೂರು: ಕೇಂದ್ರ ಸರ್ಕಾರ ಹೆಚ್ಚುತ್ತಿರುವ ಕೋವಿಡ್​ ಪ್ರಕರಣಗಳ ಹಿನ್ನೆಲೆಯಲ್ಲಿ ಕಳವಳ ವ್ಯಕ್ತಪಡಿಸುತ್ತಿರುವ 9 ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಅದರಂತೆ ಇಲ್ಲಿ ಕೋವಿಡ್​ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಸತತ ನಾಲ್ಕನೇ ದಿನವೂ ರಾಜ್ಯದಲ್ಲಿ ಕರೊನಾ ಸೋಂಕಿತರ ಸಂಖ್ಯೆ 5 ಸಾವಿರದ ಗಡಿ ದಾಟಿದೆ. ಇಂದು ಒಟ್ಟು 5,199 ಹೊಸ ಪ್ರಕರಣಗಳು ವರದಿಯಾಗಿವೆ.

    ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 96,141ಕ್ಕೆ ಏರಿದೆ. ಇದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 58,417 ಆಗಿದೆ. ಚೇತರಿಕೆ ಕಂಡು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ ನಿನ್ನೆಗೆ ಹೋಲಿಸಿದರೆ ಕೆಳಗಿಳಿದಿದೆ. ನಿನ್ನೆ 2,403 ಜನರು ಡಿಸ್ಚಾರ್ಜ್​ ಆಗಿದ್ದರೆ, ಇಂದು ಇವರ ಪ್ರಮಾಣ 2,088 ಆಗಿದೆ.

    ಇದನ್ನೂ ಓದಿ; ತುರ್ತು ಬಳಕೆಗೆ ಭಾರತದಲ್ಲಿ ರೆಡಿಯಾಗಿದೆ ಕರೊನಾ ಲಸಿಕೆ; ಏಷ್ಟಿರಲಿದೆ ಬೆಲೆ ? 

    ಸಾವಿನ ಸಂಖ್ಯೆಯೂ ಏರಿಕೆಯಾಗಿದೆ. ನಿನ್ನೆ 72 ಜನರು ಮೃತಪಟ್ಟಿದ್ದರೆ, ಇಂದು ಆ ಸಂಖ್ಯೆ 82 ಕ್ಕೆ ಏರಿಕೆಯಾಗಿದೆ. ಒಟ್ಟು ಸಾವಿನ ಪ್ರಮಾಣ 1,878 ಕ್ಕೆ ತಲುಪಿದೆ. ಮರಣ ಪ್ರಮಾಣ ಶೇ.1.95 ಆಗಿದೆ. ಚೇತರಿಕೆ ಪ್ರಮಾಣ ಶೇ.37.28 ಆಗಿದೆ.

    ರಾಜಧಾನಿಯಲ್ಲಿ ಇಂದಿನ ಒಟ್ಟು ಕೇಸ್​ಗಳು 1,950. ನಿನ್ನೆ ಈ ಸಂಖ್ಯೆ 2,063 ಆಗಿತ್ತು. ಒಟ್ಟು ಪ್ರಕರಣಗಳ ಸಂಖ್ಯೆ 45,453 ಕ್ಕೆ ಮುಟ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 33,155 ಆಗಿದೆ. ನಿನ್ನೆಗೆ ಹೋಲಿಸಿದಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದವರ ಸಂಖ್ಯೆ ಕಡಿಮೆಯಾಗಿದ್ದು ಇಂದು 647 ಜನರು ಚೇತರಿಕೆ ಕಂಡಿದ್ದಾರೆ. ನಿನ್ನೆ ಇವರ ಪ್ರಮಾಣ 686 ಇತ್ತು.

    ಇದನ್ನೂ ಓದಿ; ಧರ್ಮ ಮುಚ್ಚಿಟ್ಟು ಪ್ರೀತಿ ನಾಟಕ; ಲವ್​ ಜಿಹಾದ್​ಗೆ ಮಹಿಳೆ- ಮಗಳು ಬಲಿ; ಇಬ್ಬರನ್ನೂ ಕೊಂದು ಮನೆಯಲ್ಲಿ ಹೂತು ಹಾಕಿದ ಪಾಪಿ 

    ಇನ್ನು, ಬೆಂಗಳೂರಿನಲ್ಲಿ ಸಾವಿನ ಸಂಖ್ಯೆ ನಿನ್ನೆಗಿಂತ ಒಂದು ಹೆಚ್ಚಾಗಿದೆ. ನಿನ್ನೆ 30 ಜನರು ಮೃತಪಟ್ಟಿದ್ದರೆ, ಇಂದು 29 ಜನ ಸಾವಿಗೀಡಾಗಿದ್ದಾರೆ. ಇದರೊಂದಿಗೆ ರಾಜಧಾನಿಯಲ್ಲಿ ಕೋವಿಡ್​ನಿಂದಾದ ಒಟ್ಟು ಸಾವಿನ ಪ್ರಮಾಣ 892ಕ್ಕೆ ತಲುಪಿದೆ.
    ಇಂದು 33,565 ಜನರಿಗೆ ಕೋವಿಡ್​ ತಪಾಸಣೆ ನಡೆಸಲಾಗಿದ್ದು, ಒಟ್ಟಾರೆ ತಪಾಸನೆಗೊಳಗಾದವರ ಸಂಖ್ಯೆ 11,76827 ಆಗಿದೆ.

    ಜಿಲ್ಲೆಗಳ ಕೋವಿಡ್​ ವಿವರ

    ರಾಜ್ಯದಲ್ಲಿ ಎತ್ತ ಸಾಗುತ್ತಿದೆ ಕೋವಿಡ್? ಭರವಸೆ ಮೂಡಿಸದ ಅಂಕಿ-ಸಂಖ್ಯೆಗಳು; ಇಂದೆಷ್ಟು ಜನರಿಗೆ ಸೋಂಕು?


    https://www.vijayavani.net/in-suicide-note-aged-couple-wish-to-be-cremated-by-cops/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts