ಕಾವಿ ವಸ್ತ್ರ, ರುದ್ರಾಕ್ಷಿ ಧರಿಸಿದ ಮಹಿಳೆಯಿಂದ ಡ್ಯಾನ್ಸ್​ 
ನ್ಯೂಸ್

ಕಾವಿ, ರುದ್ರಾಕ್ಷಿ ಧರಿಸಿದ ಮಹಿಳೆಯ ವಿಚಿತ್ರ ವರ್ತನೆ; ಹಣ ಎಸೆದು, ಅಭಿಷೇಕ ಮಾಡಿದ ಭಕ್ತರು! ವೈರಲ್ ವಿಡಿಯೋ | Viral video

ಕಾವಿ ವಸ್ತ್ರ ಹಾಗೂ ರುದ್ರಾಕ್ಷಿ ಧರಿಸಿರುವ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿನ ದೃಶ್ಯಗಳ ಬಗ್ಗೆ ನೆಟ್ಟಿಗರು ಪರ-ವಿರೋಧದ ಚರ್ಚೆ ನಡೆಸುತ್ತಿದ್ದಾರೆ.

ಕಾವಿ ವಸ್ತ್ರ, ರುದ್ರಾಕ್ಷಿ ಧರಿಸಿ ಮಹಿಳೆಯ ವಿಚಿತ್ರ ವರ್ತನೆ

ಮಹಿಳೆಯ ಸುತ್ತ ಭಕ್ತರು ಹಣ ಎಸೆಯುತ್ತಿರುವ ದೃಶ್ಯ ವೈರಲ್​

ಮಹಿಳೆಗೆ ನೀರಿನಿಂದ ಅಭಿಷೇಕ ಮಾಡುತ್ತಿರುವ ಭಕ್ತರು

Saffron Robe Viral Video: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವೊಂದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಕಾವಿ ವಸ್ತ್ರ ಹಾಗೂ ರುದ್ರಾಕ್ಷಿ ಧರಿಸಿರುವ ಮಹಿಳೆಯೊಬ್ಬರು ವಿಡಿಯೋದಲ್ಲಿ ಮನಬಂದಂತೆ ಡ್ಯಾನ್ಸ್ ಮಾಡಿರುವ ದೃಶ್ಯಗಳು ಕಂಡುಬಂದಿವೆ.

ಮಹಿಳೆ ಭಕ್ತಿಯ ಹೆಸರಿನಲ್ಲಿ ಕಾವಿ ಬಟ್ಟೆ ಧರಿಸಿ ಅತಿರೇಕವಾಗಿ ವರ್ತಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ವಿಡಿಯೋದಲ್ಲಿ ಆಕೆಯ ಸುತ್ತ ಕೆಲವರು ಹಣ ಎಸೆಯುತ್ತಿರುವುದು ಹಾಗೂ ನೀರಿನಿಂದ ಅಭಿಷೇಕ ಮಾಡುತ್ತಿರುವ ದೃಶ್ಯಗಳು ಕಾಣಿಸುತ್ತವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ನೆಟ್ಟಿಗರಿಂದ ಪರ-ವಿರೋಧದ ಚರ್ಚೆ

ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪರ-ವಿರೋಧದ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಧಾರ್ಮಿಕ ಉಡುಪು ಹಾಗೂ ಚಿಹ್ನೆಗಳನ್ನು ಬಳಸಿಕೊಂಡು ಈ ರೀತಿ ವರ್ತಿಸಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಹೆಚ್ಚು ವ್ಯೂವ್ಸ್​ ಮತ್ತು ಲೈಕ್ಸ್‌ಗಾಗಿ ಧಾರ್ಮಿಕ ಸಂಕೇತಗಳನ್ನು ಬಳಸಿಕೊಂಡು ವಿವಾದಾತ್ಮಕ ವಿಡಿಯೋ ಮಾಡುವ ಟ್ರೆಂಡ್ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಿರುಗಾಳಿ ಅಬ್ಬರಕ್ಕೆ ತೆಲಂಗಾಣ ತತ್ತರ! ಮನೆಗಳ ಮೇಲ್ಛಾವಣಿ ದೂಳಿಪಟ, ಮರಗಳು ಧರೆಗೆ | Telangana Storm

ವಿಡಿಯೋ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ

ವೈರಲ್ ವಿಡಿಯೋ ಯಾವ ಸ್ಥಳದಲ್ಲಿ ಹಾಗೂ ಯಾವ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಸದ್ಯ ಸ್ಪಷ್ಟವಾಗಿಲ್ಲ. ವಿಡಿಯೋದಲ್ಲಿರುವ ಮಹಿಳೆಯ ಹಿನ್ನೆಲೆ ಮತ್ತು ಘಟನೆಯ ಸಂಪೂರ್ಣ ವಿವರಗಳೂ ತಿಳಿದುಬಂದಿಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಖಚಿತ ಮಾಹಿತಿ ಸಿಗುವವರೆಗೆ ಎಚ್ಚರಿಕೆಯಿಂದ ನೋಡುಬೇಕಿದೆ. (ಏಜೆನ್ಸೀಸ್)