ನ್ಯೂಸ್

ಯುವರತ್ನ ಚಿತ್ರತಂಡದಿಂದ ನಾಯಕಿ ಸಾಯೇಷಾ ಲುಕ್​ ರಿವೀಲ್

ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಯುವರತ್ನ ಸಿನಿಮಾ ಸದ್ದು ಮಾಡುತ್ತಿದೆ. ಪವರ್​ಸ್ಟಾರ್ ಪುನೀತ್​ ರಾಜ್​ಕುಮಾರ್ ಅವರ ಮಾಸ್ ಅವತಾರವನ್ನೂ ಚಿತ್ರತಂಡ ಬಹಿರಂಗಪಡಿಸಿದೆ. ಆದರೆ, ಎಲ್ಲೋ ಒಂದು ಕಡೆ ಚಿತ್ರದ ನಾಯಕಿಯ ಲುಕ್​ ಹೇಗಿರಲಿದೆ ಎಂಬ ಸಣ್ಣ ತುಣುಕನ್ನು ಹೊರಗೆಡವಿರಲಿಲ್ಲ ಚಿತ್ರತಂಡ. ಇದೀಗ ಆ ಕಾಯುವಿಕೆಗೆ ಬ್ರೇಕ್​ ಬಿದ್ದಿದೆ. ಅಂದರೆ, ಚಿತ್ರದ ನಾಯಕಿ ಸಾಯೇಷಾ ಸೈಗಲ್​ ಫಸ್ಟ್ ಲುಕ್​ ರಿಲೀಸ್ ಮಾಡಿದೆ ಯುವರತ್ನ ಬಳಗ.

ಅಂದಹಾಗೆ, ಇಂದು ನಟಿ ಸಾಯೇಷಾ ಸೈಗಲ್​ ಜನ್ಮದಿನ. ಆ ನಿಮಿತ್ತ ಅವರ ಲುಕ್​ ಬಿಡುಗಡೆ ಮಾಡಿ ಜನ್ಮದಿನಕ್ಕೆ ಶುಭಕೋರಿದ್ದಾರೆ ನಿರ್ದೇಶಕ ಸಂತೋಷ್ ಆನಂದ್​ರಾಮ್​. ಮುಂಬೈ ಮೂಲದ ಸಾಯೇಷಾ, ಬಾಲಿವುಡ್​ ಸೇರಿ ದಕ್ಷಿಣ ಭಾರತದ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿ ‘ಯುವರತ್ನ’ ಚಿತ್ರದ ಮೂಲಕ ಕನ್ನಡಕ್ಕೂ ಆಗಮಿಸಿದ್ದಾರೆ.

ಯುವರತ್ನ ಚಿತ್ರದಲ್ಲಿ ವಂದನಾ ಹೆಸರಿನ ಪಾತ್ರ ನಿಭಾಯಿಸುತ್ತಿರುವ ಸಾಯೇಷಾ, ಪುನೀತ್​ಗೆ ಜೋಡಿಯಾಗಿದ್ದು, ಕಾಲೇಜು ಹುಡುಗಿಯಾಗಿ ಕಾಣಿಸಕೊಂಡಿದ್ದಾರೆ. ಇನ್ನುಳಿದಂತೆ ದಿಗಂತ್​, ಧನಂಜಯ್​, ಸೋನು ಗೌಡ ಸೇರಿ ಹಲವು ಸ್ಟಾರ್ ಕಲಾವಿದರು ಸಿನಿಮಾದಲ್ಲಿದ್ದು, ಹೊಂಬಾಳೆ ಫಿಲಂಸ್ ಅಡಿಯಲ್ಲಿ ವಿಜಯ್​ ಕಿರಗಂದೂರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.