ನವದೆಹಲಿ: ಬರ್ತ್ಡೇ ಪಾರ್ಟಿಯಲ್ಲಿ ಹೈಡ್ರೋನ್ ಬಲೂನ್ಗಳು ಸ್ಫೋಟಗೊಂಡ ಪರಿಣಾಮ ಮಹಿಳೆಯ ಮುಖ ಸುಟ್ಟಿ ಹೋಗಿರುವ ಘಟನೆ ವಿಯೆಟ್ನಾಂನ ಹನೋಯಿಯಲ್ಲಿ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Video Viral) ಆಗಿದ್ದು, ಎಚ್ಚರಿಕೆ ವಹಿಸುವಂತೆ ಕಮೆಂಟ್ ಹಾಕುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋ (Viral Video) ನೋಡುವುದಾದರೆ ಒಂದು ಕೈನಲ್ಲಿ ಕೇಕ್ ಮತ್ತೊಂದು ಕೈನಲ್ಲಿ ಬಲೂನ್ಗಳನ್ನು ಹಿಡಿದುಕೊಂಡಿರುವ ಯುವತಿ ಕ್ಯಾಂಡಲ್ ಊದಲು ಮುಂದಾಗುತ್ತಾರೆ. ಈ ವೇಳೆ ಹೈಡ್ರೋಜನ್ ಬಲೂನ್ಗಳಿಗೆ ಬೆಂಕಿ ತಗುಲಿದ್ದು, ಕ್ಷಣಾರ್ಧದಲ್ಲೇ ಸ್ಫೋಟಗೊಂಡಿದೆ. ಬೆಂಕಿಯು ಯುವತಿ ಮುಖಕ್ಕೆ ತಗುಲಿದ್ದು, ಸದ್ಯ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ಮಾತನಾಡಿರುವ ವೈದ್ಯರೊಬ್ಬರು, ಯುವತಿ ಗಿಯಾಂಗ್ ಮುಖಕ್ಕೆ ಬೆಂಕಿ ತಗುಲಿದ್ದು, ಆಕೆಯ ಮುಖದ ಮೇಲೆ ಕೆಲವು ತಿಂಗಳು ಸುಟ್ಟ ಕಲೆಗಳು ಇರುತ್ತವೆ. ಆಕೆ ಚೇತರಿಸಿಕೊಳ್ಳಲು ಸಮಯ ಹಿಡಿಯುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.