Birth Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು ಧರ್ಮದಲ್ಲಿ ಈ ಜನ್ಮ ದಿನಾಂಕ ಮತ್ತು ಹುಟ್ಟಿದ ಗಳಿಗೆಯು ವ್ಯಕ್ತಿಯ ಜೀವನದ ಮೇಲೆ ಬಹಳ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ. ಹುಟ್ಟಿದ ದಿನ ಮತ್ತು ಗಳಿಗೆಯ ಆಧಾರದ ಮೇಲೆ ವ್ಯಕ್ತಿಯ ರಾಶಿ ಮತ್ತು ನಕ್ಷತ್ರಗಳನ್ನು ನಿರ್ಧರಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಒಬ್ಬ ವ್ಯಕ್ತಿಯ ಹುಟ್ಟಿದ ರಾಶಿಚಕ್ರ ಚಿಹ್ನೆ ಮತ್ತು ನಕ್ಷತ್ರವು ಆತನ ಭವಿಷ್ಯ ಜೀವನ ಮತ್ತು ವ್ಯಕ್ತಿತ್ವದ ಮೇಲೆ ಮಹತ್ವದ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಅಂದಹಾಗೆ ಒಬ್ಬ ವ್ಯಕ್ತಿಯ ಗುಣ, ನಡತೆ, ವರ್ತನೆ ಹಾಗೂ ಆತನ ಆಗು ಹೋಗುಗಳ ಹಿಂದೆ ಜನ್ಮ ನಕ್ಷತ್ರಗಳು ಕಾರಣವಾಗಿರುತ್ತದೆ. ಜನ್ಮ ನಕ್ಷತ್ರದ ಪ್ರಕಾರವಾಗಿ ಜೀವನದಲ್ಲಿ ಏನು ನಡೆಯಬೇಕೋ ಅದು ನಡದೇ ನಡೆಯುತ್ತದೆ ಎಂದು ಹಿರಿಯರು ಹೇಳುತ್ತಿರುತ್ತಾರೆ.
ನಿಮ್ಮ ಜನ್ಮ ನಕ್ಷತ್ರದ ಪ್ರಕಾರ ನಿಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿದುಕೊಳ್ಳಬಹುದು. ಈ ಜನ್ಮ ನಕ್ಷತ್ರಗಳು ಪ್ರಭಾವ ಒಂದೇ ರೀತಿ ಇರುವುದಿಲ್ಲ. ಗ್ರಹಗಳ ಚಲನೆಯಿಂದಾಗಿ ಅವುಗಳ ಪ್ರಭಾವವೂ ಕೂಡ ಬದಲಾಗುತ್ತಿರುತ್ತದೆ. ಒಂದು ಸಮಯದಲ್ಲಿ ನೋವು ಅನುಭವಿಸಿದ್ದರೆ, ಇನ್ನೊಂದು ಸಮಯದಲ್ಲಿ ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ.
ಅಂದಹಾಗೆ, ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರನ್ನು ಮದುವೆಯಾಗುವ ಪುರುಷರು ತುಂಬಾ ಅದೃಷ್ಟವಂತರು ಎಂದು ಜ್ಯೋತಿಷ್ಯ ಹೇಳುತ್ತದೆ. ಇದಕ್ಕೆ ಕಾರಣಗಳು ಏನು ಅನ್ನೋದನ್ನು ನಾವು ಈ ಪೋಸ್ಟ್‌ನಲ್ಲಿ ವಿವರವಾಗಿ ನೋಡೋಣ.
* ಸ್ವಾತಿ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ತಮ್ಮ ಪತಿಯ ಯಶಸ್ಸಿಗೆ ಕಾರಣರಾಗುತ್ತಾರೆ. ಅವರನ್ನು ಮದುವೆಯಾಗುವ ಪುರುಷ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಖಂಡಿತವಾಗಿಯೂ ಯಶಸ್ವಿಯಾಗುತ್ತಾನೆ.
* ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ತಾವು ಪ್ರವೇಶಿಸುವ ಕುಟುಂಬಕ್ಕೆ ಕೀರ್ತಿ ತರುವ ಅದೃಷ್ಟದೊಂದಿಗೆ ಜನಿಸುತ್ತಾರೆ. ಅವರಿಗೆ ದೇವರಲ್ಲಿ ಅಪಾರ ನಂಬಿಕೆ ಇರುತ್ತದೆ.
* ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ತಮ್ಮ ಗಂಡಂದಿರಿಗೆ ವಿಧೇಯರಾಗಿರುತ್ತಾರೆ ಮತ್ತು ಅವರ ವೈವಾಹಿಕ ಸಂಬಂಧವನ್ನು ಹೆಚ್ಚು ಗೌರವಿಸುತ್ತಾರೆ.
* ಈ ನಕ್ಷತ್ರದಲ್ಲಿ ಜನಿಸಿದ ಮಹಿಳೆಯರು ತಮ್ಮ ಗಂಡಂದಿರಿಗೆ ದೀರ್ಘಾಯುಷ್ಯವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ. ಅವರು ಸ್ವಭಾವತಃ ತುಂಬಾ ಸಾಧಾರಣ ಮಹಿಳೆಯರು.
* ಇವರು ಗುರಿಗಳನ್ನು ಸಾಧಿಸುವಲ್ಲಿ ತಮ್ಮ ಪತಿಯರಿಗೆ ಯಾವಾಗಲೂ ಬೆಂಬಲವಾಗಿ ನಿಲ್ಲುತ್ತಾರೆ. ತಮ್ಮ ಸ್ವಂತ ಆಸೆಗಳಿಗಿಂತ ಪತಿಯ ಆಸೆಗಳಿಗೆ ಪ್ರಾಮುಖ್ಯತೆ ನೀಡುವ ಗುಣ ಇವರಲ್ಲಿರುತ್ತದೆ.
* ತಮ್ಮ ಪ್ರೀತಿಯನ್ನು ಮಾತಿನ ಮೂಲಕವಲ್ಲ, ಕ್ರಿಯೆಯ ಮೂಲಕ ವ್ಯಕ್ತಪಡಿಸುತ್ತಾರೆ. ಅವರ ಸ್ವಭಾವವು ಶಾಂತಿಯುತವಾಗಿರುವುದರಿಂದ, ಈ ಮಹಿಳೆಯರು ದಾಂಪತ್ಯ ಜೀವನವನ್ನು ಸ್ವರ್ಗವನ್ನಾಗಿ ಮಾಡುವ ಶಕ್ತಿಯನ್ನು ಹೊಂದಿದ್ದಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ ವಿಜಯವಾಣಿ ಡಾಟ್ ನೆಟ್ ಸೈಟ್ ಜವಾಬ್ದಾರರಾಗಿರುವುದಿಲ್ಲ.