ನ್ಯೂಸ್

ಆನ್​​ಲೈನ್​ ಗೇಮ್​ಗಳ ನಿಷೇಧಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ | Bill Pass

ನವದೆಹಲಿ: ಹೆಚ್ಚುತ್ತಿರುವ ವ್ಯಸನ ಮತ್ತು ಹಣ ವರ್ಗಾವಣೆ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಹಣದಿಂದ ಆಡುವ ಆನ್‌ಲೈನ್ ಆಟಗಳನ್ನು(ಬೆಟ್ಟಿಂಗ್​​ ಆ್ಯಪ್​) ನಿಷೇಧಿಸುವ ಮಸೂದೆಯನ್ನು ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ಇದೀಗ ಮಸೂದೆಯ ಕರಡು ಕಾನೂನನ್ನು(Bill Pass) ಲೋಕಸಭೆ ಬುಧವಾರ ಅಂಗೀಕರಿಸಿದೆ.

ಪ್ರಸ್ತಾವಿತ ಮಸೂದೆ ಬೆಟ್ಟಿಂಗ್ ಅಥವಾ ಜೂಜಾಟಗಳನ್ನು ಒಳಗೊಂಡ ಆನ್‌ಲೈನ್ ಗೇಮ್ ಗಳನ್ನು ನಿಷೇಧಿಸಲು ಕಠಿಣ ನಿಬಂಧನೆ ಜತೆಗೆ ಶಿಕ್ಷೆ ಮತ್ತು ದಂಡ ಒಳಗೊಂಡಿರಲಿದೆ. ಮುಖ್ಯವಾಗಿ ಸೆಲೆಬ್ರಿಟಿಗಳು ಬೆಟ್ಟಿಂಗ್ ಸಂಬಂಧಿತ ಆನ್‌ಲೈನ್ ಗೇಮಿಂಗ್ ಅಪ್ಲಿಕೇಷನ್‌ಗಳನ್ನು ಪ್ರಚಾರ ಮಾಡಲು ನಿರ್ಬಂಧ ಹೇರುವುದಕ್ಕೆ ಹಾಗೂ ಈ ನಿಯಮವನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

ಸಮಾಜದ ಸ್ವಾಸ್ಥ ಕೆಡಿಸಿ, ಯುವಪೀಳಿಗೆಗೆ ಕಂಟಕವಾಗಿ ಮಾರ್ಪಟ್ಟಿರುವ ಆನ್‌ಲೈನ್ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳ ದುರುಪಯೋಗ ನಿಯಂತ್ರಿಸಲು ಮತ್ತು ರಾಷ್ಟ್ರೀಯ ಭದ್ರತೆಗೆ ಅಪಾಯ ಉಂಟುಮಾಡುವ ಅಕ್ರಮ ಬೆಟ್ಟಿಂಗ್ ಚಟುವಟಿಕೆ ನಿಗ್ರಹಿಸುವ ಆನ್‌ಲೈನ್ ಗೇಮಿಂಗ್ ಮಸೂದೆಗೆ ಅಂಗಿಕಾರವಾಗಿದೆ.