ನ್ಯೂಸ್

ಬೀದಿ ಬದಿ ಚಾಯ್ ಕುಡಿದ ಬಿಲ್ ಗೇಟ್ಸ್; ವಿಡಿಯೋ ನೋಡಿ

ಬೆಂಗಳೂರು: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ, ಜಗತ್ತಿನ ಪ್ರಸ್ತುತ 7ನೇ ಶ್ರೀಮಂತ ಎಂದೆ ಹೆಸರುವಾಸಿಯಾಗಿರುವ ಬಿಲ್ ಗೇಟ್ಸ್ ಸಧ್ಯ ಭಾರತದಲ್ಲಿದ್ದು, ರಸ್ತೆ ಬದಿ ಟೀ ಕುಡಿದು ಸರಳತೆ ಮರೆದಿದ್ದಾರೆ.

ವಿಡಿಯೋದಲ್ಲಿ ಏನಿದೆ?: ಬಿಲ್ ಗೇಟ್ಸ್ ದಾರಿ ಬದಿಯಲ್ಲಿ ಚಹಾ ಸವಿಯುವುದನ್ನು ಕಾಣಬಹುದು. ಈ ಬಗ್ಗೆ ಪೋಸ್ಟ್ ಜೊತೆ ಬರೆದುಕೊಂಡಿರುವ ಗೇಟ್ಸ್, 'ಭಾರತದಲ್ಲಿ ನೀವು ಎಲ್ಲಿ ನೋಡಿದರಲ್ಲಿ ನಾವೀನ್ಯತೆಯನ್ನು ಕಾಣಬಹುದು. ಚಹಾ ತಯಾರಿಕೆಯಲ್ಲಿ ಕೂಡಾ' ಎಂದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಿದ್ಧಿ ಪಡೆದಿರುವ ಡಾಲಿ ಚಾಯ್‌ವಾಲಾ ಬಳಿ ಹೋಗಿ 'ಒನ್ ಚಾಯ್ ಪ್ಲೀಸ್' ಎನ್ನುತ್ತಾರೆ ಬಿಲ್ ಗೇಟ್ಸ್. ನಂತರ ಚಾಯ್‌ವಾಲಾ ತನ್ನ ವಿಶಿಷ್ಟ ವಿಧಾನ ಬಳಸಿ ಚಹಾವನ್ನು ತಯಾರಿಸುತ್ತಾನೆ. ಬಳಿಕ ಗೇಟ್ಸ್ ಒಂದು ಕಪ್ ಚಾಯ್ ಅನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ವೀಡಿಯೊದ ಕೊನೆಯಲ್ಲಿ ಡಾಲಿ ಚಾಯ್‌ವಾಲಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿ, ತಾವು ಬಹಳಷ್ಟು ಚಾಯ್ ಪೇ ಚರ್ಚಾಕ್ಕಾಗಿ ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. 

ಬಿಲ್ ಗೇಟ್ಸ್ ಸಿಂಪಲ್ ಆಗಿ ಟೀ ಕುಡಿದಿದ್ದಕ್ಕೆ ನೆಟಿಜನ್ ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಷ್ಟೇ ಬೆಳೆದರೂ ಸರಳತೆಯಿಂದ ದೊಡ್ಡವರಾಗುತ್ತಾರೆ , ಮಹಾನ್ ವ್ಯಕ್ತಿಯಾಗಿದ್ದಾರೆಂದು ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.