More

  ‘ಅದೇ ನನಗೆ ಬೇಕು.. ನಾನು ತಾಯಿಯಾಗಬೇಕು’..! ನಟಿ ಶೋಭಿತಾ ಹೇಳಿಕೆ ವೈರಲ್‌

  ಚೆನ್ನೈ: ದಕ್ಷಿಣ ಭಾರತದ ಸ್ಟಾರ್​ ನಟಿಯರಲ್ಲಿ ಒಬ್ಬರಾದ ನಟಿ ಶೋಭಿತಾ ಧೂಳಿಪಾಲ ಇದೀಗ ತಾಯಿತನದ ಕುರಿತು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿವೆ. ಅಲ್ಲದೆ, ನಟಿಯ ಮಾತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ..

  2016 ರಲ್ಲಿ ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ʼರಮಣ್ ರಾಘವ್ 2.0ʼ ಸಿನಿಮಾದ ಮೂಲಕ ಶೋಭಿತಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. 2017 ರಲ್ಲಿ ಬಿಡುಗಡೆಯಾದ ʼಗೂಢಾಚಾರಿʼ ಸಿನಿಮಾದ ಮೂಲಕ ಸಾಕಷ್ಟು ಕ್ರೇಜ್ ಗಿಟ್ಟಿಸಿಕೊಂಡರು.

  ಸಧ್ಯ ಮಂಕಿ ಮ್ಯಾನ್ ಎಂಬ ಹಾಲಿವುಡ್ ಸಿನಿಮಾದಲ್ಲಿ ಸೋಭಿತಾ ನಟಿಸುತ್ತಿದ್ದಾರೆ. ಈ ಮೂಲಕ ಅವರು ಪ್ಯಾನ್‌ ವರ್ಲ್ಡ್‌ ಲೆವೆಲ್‌ನಲ್ಲಿ ಮಿಂಚಲಿದ್ದಾರೆ. ಈ ಸಿನಿಮಾ ಅವರಿಗೆ ಯಶಸ್ಸನ್ನು ತಂದುಕೊಡಲಿದೆ ಎಂದು ಅಭಿಮಾನಿಗಳು ಹಾರೈಸಿದ್ದಾರೆ.

  ಇದನ್ನೂ ಓದಿ: ಪೋರ್ನ್ ಸೈಟ್‌ಗೆ ಸೇರಿದ ಐದೇ ನಿಮಿಷದಲ್ಲಿ ನಟಿಯ ಎಲ್ಲ ಸಾಲ ಸೆಟ್ಲ್!

  ಇದರ ನಡುವೆ ಇತ್ತೀಚಿನ ಸಂದರ್ಶನವೊಂದರಲ್ಲಿ ಶೋಭಿತಾ ಜೀವನದ ನಿಜವಾದ ಅರ್ಥವೇನುʼ ಎಂಬ ಪ್ರಶ್ನೆಗೆ ಉತ್ತರಿಸುತ್ತ, ನಾವು ಮಾಡುವ ಕೆಲಸಗಳು ನಮಗೆ ಖುಷಿ ಕೊಡುವ ರೀತಿಯಲ್ಲಿ ಇರಬೇಕು. ಅಲ್ಲದೆ, ಜೀವನದಲ್ಲಿ ಹೆಚ್ಚು ಆಶಿಸಿದ್ದು ತಾಯ್ತನ ಎಂದು ಭಾವುಕರಾಗಿ ಮಾತನಾಡಿದ್ದು. ವಾಸ್ತವವಾಗಿ, ಅದು ಯಾವಾಗ ಬರುತ್ತದೆ ಅಂತ ನನಗೆ ತಿಳಿದಿಲ್ಲ, ಆದರೆ ಅದು ಅದ್ಭುತ ಘಳಿಗೆ ಅಂತ ತಾಯ್ತನದ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದ್ದಾರೆ.

  ಇನ್ನು ಮಗುವಿಗೆ ತಾಯಿಯಾಗುವುದು.. ಅಮ್ಮ ಅಂತ ಕರೆಸಿಕೊಳ್ಳುವುದು ತುಂಬಾ ಒಳ್ಳೆಯದು. ಅದಕ್ಕಾಗಿ ಕಾಯುತ್ತಿರುವೆ ಅಂತ ಹೇಳಿರುವ ಶೋಭಿತಾ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ನಟಿಯ ಮಾತಿಗೆ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  ಕಳೆದ ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀತಿಯ ವದಂತಿಗಳು ಹರಿದಾಡುತ್ತಿವೆ. ನಾಗ ಚೈತನ್ಯ ಮತ್ತು ಶೋಭಿತಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯೂ ಆಗು್ತಾರೆ ಎಂದು ಹೇಳಲಾಗಿತ್ತು.

  ‘ಆಪರೇಷನ್​ ಕಮಲ’ ಪ್ರಸ್ತಾಪಿಸಿ ಬಿಜೆಪಿಗೆ ಛೀಮಾರಿ ಹಾಕಿದ ಸಿದ್ದು!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts