ನ್ಯೂಸ್

ಪುರುಷರಿಗಾಗಿ ಬಂತು ಬಿಕಿನಿ...! ಇದು ಬ್ರೊಕಿನಿ

rameshmysuru

ಟೊರೊಂಟೋ: ಮಹಿಳೆಯರ ಈಜುಡುಗೆ, ತುಂಡುಡುಗೆ, ಬೀಚ್​ವೇರ್​ ಎಂದೆಲ್ಲ ಕರೆಯಿಸಿಕೊಳ್ಳುತ್ತಿದ್ದ ಬಿಕಿನಿ ಈಗ ಪುರುಷರ ಸಾಮ್ರಾಜ್ಯಕ್ಕೂ ಕಾಲಿರಿಸಿದೆ.

ಟೊರೊಂಟೋದ ಇಬ್ಬರು ಯುವಕರು ಪುರುಷರಿಗಾಗಿ ಬಿಕಿನಿ ಮಾರಾಟ ಮಾಡುವ ಕಂಪನಿಯನ್ನು ಆರಂಭಿಸಿದ್ದಾರೆ. ಇದಕ್ಕವರು ಬ್ರೊಕಿನಿ ಎಂದು ಹೆಸರಿಟ್ಟಿದ್ದಾರೆ.

ಚಾಡ್​ ಸಾಸ್ಕೋ ಹಾಗೂ ಟೇಲರ್ ಫೀಲ್ಡ್​ ಈ ಕಂಪನಿಯ ರೂವಾರಿಗಳು. ಇಟ್ಸ್​ ಬಿಕಿನಿ ಫಾರ್​ ಮೆನ್​ ಎಂಬ ಟ್ಯಾಗ್​ಲೈನ್​ ಕೂಡ ಇದಕ್ಕಿದೆ. ಸೋ ಆಫ್​ ಯೂವರ್​ ಪ್ಯಾಕೇಜ್​ ಇನ್​ ಸ್ಟೈಲ್​ ಆ್ಯಂಡ್​ ಡಿಸಪಾಯಿಂಟ್​ ಯೂವರ್​ ಪೇರೇಂಟ್ಸ್​ ಎಂದೂ ಇವರು ಹೇಳುತ್ತಾರೆ.

ಸದ್ಯ ಇದರ ಬೆಲೆಯನ್ನು 45 ಡಾಲರ್​ (ಅಂದಾಜು 3,375 ರೂ. ) ನಿಗದಿಪಡಿಸಲಾಗಿದೆ. ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ ಉಡುಪು ಒಂದೇ ಕಡೆ ತೋಳನ್ನು ಹೊಂದಿದೆ.

ಬ್ಯಾಚುಲರ್​ ಪಾರ್ಟಿಗಳಿಗೆ ಹೋದಾ ಪುರುಷರಿಗಾಗಿ ಸ್ನಾನದ ಉಡುಪುಗಳಿಲ್ಲ ಎಂಬುದು ಅರಿವಿಗೆ ಬಂತು. ನಂತರ ಕುಸ್ತಿಯಲ್ಲಿ ಪುರುಷರು ಧರಿಸುವ ಉಡುಪು ಗಮನಿಸಿದೆವು. ಇದನ್ನು ಸ್ನಾನದ ಉಡುಪಾಗಿ ಬದಲಾಯಿಸಬಹುದು ಎನಿಸಿತು ಎಂದು ಸಾಸ್ಕೋ ಹೇಳಿದ್ದಾರೆ.

ಈ ಉಡುಪು ತಯಾರಿಕೆಗೆ ಉತ್ಪಾದಕರನ್ನು ಸಂಪರ್ಕಿಸಿದಾಗ ಅವರು 250 ಬ್ರೊಕಿನಿಗಳನ್ನು ತಯಾರಿಸಿ ನೀಡಿದ್ದಾರೆ. ಸದ್ಯ ಇದಕ್ಕಾಗಿ 5,000 ಡಾಲರ್​ಗಳನ್ನು ಖರ್ಚು ಮಾಡಿದ್ದೇವೆ ಎಂದು ಮಾಹಿತಿ ನೀಡುತ್ತಾರೆ.