ಸಾಂದರ್ಭಿಕ ಚಿತ್ರ  
ನ್ಯೂಸ್

ಟ್ರಾಫಿಕ್​ ಪೊಲೀಸ್​ ನೋಡುತ್ತಿದ್ದಂತೆ ಹೆಲ್ಮೆಟ್​ ಧರಿಸಿದ ಸವಾರ; ಮುಂದೆ ಆಗಿದ್ದು ಮಾತ್ರ...

ಹೈದರಾಬಾದ್​: ದೇಶದಲ್ಲಿ ದಿನದಿಂದ ದಿನಕ್ಕೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ಬೈಕ್​ ಸವಾರರೇ ಹೆಚ್ಚು ಬಲಿಯಾಗುತ್ತಿದ್ದಾರೆ. ವಾಹನ ಚಾಲನೆ ವೇಳೆ ಹೆಲ್ಮೆಟ್​ ಧರಿಸದೆ ಇರುವುದು ಇದಕ್ಕೆ ಮುಖ್ಯ ಕಾರಣ ಎಂದು ಹೇಳಲಾಗಿದೆ. ಬೈಕ್​ ಸವಾರರು ಹೆಲ್ಮೆಟ್​ ಧರಿಸದೆ ವಾಹನ ಚಾಲನೆ ಮಾಡುವುದನ್ನು ನಾವು ಪ್ರತಿನಿತ್ಯ ನೋಡುತ್ತಿರುತ್ತೇವೆ. ಒಂದು ವೇಳೆ ರಸ್ತೆಯಲ್ಲಿ ಪೊಲೀಸ್​ ಕಂಡರೆ ಕೂಡಲೇ ಯೂಟರ್ನ್​ ತೆಗೆದುಕೊಳ್ಳತ್ತೇವೆ. ಇಲ್ಲವಾದಲ್ಲಿ ಹೆಲ್ಮೆಟ್​ ಧರಿಸಿ ಮುಂದಕ್ಕೆ ಹೋಗುತ್ತೇವೆ. ಬೈಕ್​ ಸವಾರರಿಗೆ ಬುದ್ದಿ ಕಲಿಸುವ ನಿಟ್ಟಿನಲ್ಲಿ ಪೊಲೀಸರು ಮಾಡಿರುವ ಮಾಸ್ಟರ್​ಪ್ಲಾನ್​ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ವ್ಯಾಪಕ ಪ್ರಶಂಸೆಗೆ ಕಾರಣವಾಗಿದೆ.

ತೆಲಂಗಾಣದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಪೊಲೀಸರ ಉಪಾಯವನ್ನು ನೆಟ್ಟಿಗರು ಹಾಡಿಹೊಗಳುತ್ತಿದ್ದು, ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಸವಾರನೋರ್ವ ಹೆಲ್ಮೆಟ್​ ಧರಿಸದೆ ವೇಗವಾಗಿ ಬೈಕ್​ ಓಡಿಸಿಕೊಂಡು ಬರುತ್ತಿದ್ದು, ಡಿವೈಡರ್​ ಬಳಿ ಪೊಲೀಸ್​ ಗಸ್ತು ವಾಹನ ಕಂಡು ಗಾಡಿಯನ್ನು ನಿಲ್ಲಿಸಿ ಹೆಲ್ಮೆಟ್​ ಧರಿಸುತ್ತಾನೆ. ಬಳಿಕ ನಿಧಾನವಾಗಿ ಮುಂದಕ್ಕೆ ಹೋಗುವ ಆತ ಪೊಲೀಸ್​ ಅಧಿಕಾರಿಯನ್ನು ನೋಡಿದಾಗ ಅದು ಬೊಂಬೆ ಎಂದು ತಿಳಿಯುತ್ತದೆ. ಪೊಲೀಸರ ಈ ಉಪಾಯವನ್ನು ಕಂಡು ಶಾಕ್​ ಆದ ಸವಾರ ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದಾನೆ.

ಗಮನಾರ್ಹ ವಿಚಾರ ಎಂದರೆ ಗೊಂಬೆಯನ್ನು ನಿಲ್ಲಿಸುವ ಬದಲು ಪೊಲೀಸರು ಅಧಿಕಾರಿಯೊಬ್ಬರ ಬ್ಯಾನರ್​ಅನ್ನು ರಚಿಸಿ ಅಳವಡಿಸಿದ್ದಾರೆ. ಈ ಕಟ್​ಔಟ್​ಅನ್ನು ತಿರುವುಗಳಲ್ಲಿ ಇರಿಸಲಾಗಿದ್ದು, ಅನೇಕರು ನಿಜವಾದ ಪೊಲೀಸ್​ ಅಧಿಕಾರಿ ಎಂದುಕೊಂಡು ಜಾಗರೂಕರಾಗಿ ವಾಹನ ಚಾಲನೆ ಮಾಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.