ವಿಜಯನಗರ: ಅಪಘಾತ ಅಂದ್ರೆ ಎದೆ ಝಲ್ ಅನ್ನುತ್ತೆ. ಇನ್ನು ಭೀಕರ ಅಂದ್ರೆ ಜೀವ ಬಾಯಿಗೆ ಬಂದಂತಾಗುತ್ತೆ. ಹೊಸಪೇಟೆ ತಾಲೂಕಿನ ಪೋತಲಕಟ್ಟಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಇಂದು ನಡೆದ ಅಪಘಾತದ ದೃಶ್ಯ ನೋಡಿದವರ ಸ್ಥಿತಿಯೂ ಹೀಗೆ ಇತ್ತು.
ಬೈಕ್ಗೆ ಕಾರು ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ನಿಂದ ಹಾರಿದ ಸವಾರ ರಸ್ತೆ ಡಿವೈಡರ್ನ ಕಬ್ಬಿಣದ ಸಲಾಕೆ ಮೇಲೆ ಬಿದ್ದು, ಅಲ್ಲೇ ಪ್ರಾಣಬಿಟ್ಟಿದ್ದಾನೆ. ಡಿವೈಡರ್ನ ಮೇಲೆ ಶವ ಬಿದ್ದಿರುವ ದೃಶ್ಯ ಎಂತಹವರಿಗೂ ಭಯ ಹುಟ್ಟಿಸುತ್ತಿತ್ತು. ಬಸಪ್ಪ(55) ಮೃತಪಟ್ಟ ಬೈಕ್ ಸವಾರ. ಮರಿಯಮ್ಮನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿರಿ ಬಸ್-ಆಟೋ ನಡುವೆ ಭೀಕರ ಅಪಘಾತ: 13 ಮಂದಿ ಸಾವು, ಹಲವರ ಸ್ಥಿತಿ ಗಂಭೀರ