ಪಟನಾ: ಬಿಹಾರ ವಿಧಾನ ಸಭಾ ಚುನಾವಣೆಯ ಫಲಿತಾಂಶ ಬೆಳಗ್ಗೆಯಿಂದಲೇ ರೋಚಕತೆ ಸೃಷ್ಟಿಸಿದ್ದು, ಆಡಳಿತಾರೂಢ ಎನ್ಡಿಎ ಮತ್ತು ಆರ್ಜೆಡಿ ನೇತೃತ್ವದ ಮಹಾಗಟ ಬಂಧನ್ ನಡುವೆ ರೋಚಕ ಪೈಪೋಟಿ ಏರ್ಪಟ್ಟಿದೆ. ಕೋವಿಡ್ ಕಾರಣದಿಂದ ಮತ ಎಣಿಕೆ ಮಂದಗತಿಯಲ್ಲಿ ಮುಂದುವರಿದಿದೆ.
ಸದ್ಯದ ಮಾಹಿತಿ ಪ್ರಕಾರ, 243 ಕ್ಷೇತ್ರಗಳ ಪೈಕಿ 146 ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. 97 ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದೆ. 150 ಕ್ಷೇತ್ರಗಳ ಪೈಕಿ ಬಿಜೆಪಿ 44, ಜೆಡಿಯು 27, ಹಿಂದುಸ್ಥಾನಿ ಅವಾಂ ಮೋರ್ಚಾ 3, ವಿಕಾಸ ಶೀಲ್ ಇನ್ಸಾನ್ ಪಾರ್ಟಿ 4 ಸ್ಥಾನಗಳನ್ನು ಗೆದ್ದುಕೊಂಡಿವೆ. ಇದರೊಂದಿಗೆ ಎನ್ಡಿಎ ಮೈತ್ರಿಕೂಟ 75 ಸ್ಥಾನಗಳಲ್ಲಿ ಗೆಲುವು ಕಂಡಿದೆ. ಮತ ಎಣಿಕೆ ಪ್ರಗತಿಯಲ್ಲಿರುವ 93 ಕ್ಷೇತ್ರಗಳ ಪೈಕಿ ಬಿಜೆಪಿ 28, ಜೆಡಿಯು 16, ಹಿಂದುಸ್ಥಾನಿ ಅವಾಂ ಮೋರ್ಚಾ 1 ರಲ್ಲಿ ಮುನ್ನಡೆಯಲ್ಲಿವೆ.
ಇನ್ನೊಂದೆಡೆ, ಆರ್ಜೆಡಿ 47, ಕಾಂಗ್ರೆಸ್ 8 ಸ್ಥಾನಗಳಲ್ಲಿ ಗೆಲುವು ದಾಖಲಿಸಿವೆ. ಮತ ಎಣಿಕೆ ಪ್ರಗತಿಯಲ್ಲಿರುವ ಕ್ಷೇತ್ರಗಳಲ್ಲಿ ಆರ್ಜೆಡಿ 30, ಕಾಂಗ್ರೆಸ್ 11ರಲ್ಲಿ ಮುನ್ನಡೆಯಲ್ಲಿವೆ. ಉಳಿದಂತೆ ಎಡರಂಗವೂ ಕೆಲವು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಕೆಲವದರಲ್ಲಿ ಮುನ್ನಡೆ ಸಾಧಿಸಿದೆ. ಸದ್ಯದ ಬಲಾಬಲದ ಚಿತ್ರಣ ಈ ಕೆಳಗಿನಂತಿದೆ.
ರಾತ್ರಿ 10.20ರ ಮಾಹತಿ ಪ್ರಕಾರ ಪಕ್ಷಗಳ ಬಲಾಬಲ ಈ ರೀತಿ ಇದೆ..
ರಾತ್ರಿ 10.30ರ ಮಾಹತಿ ಪ್ರಕಾರ ಪಕ್ಷಗಳ ಬಲಾಬಲ ಈ ರೀತಿ ಇದೆ..