ಗೋಪಾಲ್‌ಗಂಜ್: ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಮಧ್ಯರಾತ್ರಿ ಮನೆಗೆ ಬಂದ ಯುವಕನನ್ನು ಗ್ರಾಮಸ್ಥರು ಒತ್ತೆಯಾಳಾಗಿಟ್ಟುಕೊಂಡು ಬರ್ಬರವಾಗಿ ಥಳಿಸಿದ ಆಘಾತಕಾರಿ ಘಟನೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಆಸೆ ಈಡೇರದ ಹಿನ್ನೆಲೆ: ಶಿವಲಿಂಗವನ್ನೇ ಕದ್ದೊಯ್ದ ಯುವಕ..
ಘಟನೆಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಪ್ರಕರಣವು ಗೋಪಾಲ್‌ಗಂಜ್ ಜಿಲ್ಲೆಯ ಮಂಜಾ ಪೊಲೀಸ್ ಠಾಣೆ ವ್ಯಾಪ್ತಿಯ ಫುಲ್ವಾರಿಯಾ ಗ್ರಾಮದಲ್ಲಿ ನಡೆದಿದೆ ಎನ್ನಲಾಗಿದೆ. ಈ ವಿಡಿಯೋದಲ್ಲಿ ಗ್ರಾಮದ ಜನರು ಪ್ರೇಮಿಯ ಕೈಕಾಲುಗಳನ್ನು ಕಟ್ಟಿ ಆತನಿಗೆ ಥಳಿಸಿ ಒತ್ತೆಯಾಳಾಗಿರಿಸಿ ಕೊಂಡ ಬಳಿಕ ಗ್ರಾಮಸ್ಥರು ಯುವಕನನ್ನು ಬೆಳಿಗ್ಗೆ ಬಿಡುಗಡೆಗೊಳಿಸಿದ್ದಾರೆ.
ಈ ಯುವಕ ಗ್ರಾಮದ ಹುಡುಗಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಮಧ್ಯರಾತ್ರಿಯಲ್ಲಿ, ಹಳ್ಳಿಯ ಎಲ್ಲರೂ ಮಲಗಿರುವಾಗ, ಅವನು ತನ್ನ ಪ್ರಿಯತಮೆಯನ್ನು ಭೇಟಿಯಾಗಲು ರಹಸ್ಯವಾಗಿ ಹೋಗುತ್ತಿದ್ದನು. ಆದರೆ ಈ ವೇಳೆ ಗ್ರಾಮಸ್ಥರು ಬಾಲಕಿಯ ಮನೆಗೆ ನುಗ್ಗಿ ಪ್ರಿಯಕರನನ್ನು ಒತ್ತೆಯಾಳಾಗಿ ಇಟ್ಟಿದ್ದಾರೆ. ಅದೇ ಸಮಯದಲ್ಲಿ, ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೆಳಿಗ್ಗೆ ಸ್ಥಳಕ್ಕೆ ತಲುಪಿದ್ದು, ಘಟನೆ ಬಗ್ಗೆ ಯಾವುದೇ ದೂರು ಬಂದಿಲ್ಲ. ಈ ಬಗ್ಗೆ ದೂರು ಬಂದರೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.(ಏಜೆನ್ಸೀಸ್)