ನ್ಯೂಸ್

ಅಕ್ಕನ ಬದಲು ತಂಗಿಯನ್ನು ಮದುವೆಯಾಗಲು ಸಿದ್ಧನಾದ ವರ; ಮುಂದೇನಾಯ್ತ..?

ಬಿಹಾರ: ಇಂದಿನ ಮದುವೆಗಳು ವಧುವಿನ ಕೊರಳಿಗೆ ತಾಳಿ ಕಟ್ಟುವವರೆಗೂ ಯಾವುದೇ ಗ್ಯಾರೆಂಟಿ ಇಲ್ಲ ಎನ್ನುವಷ್ಟು ಸಮಸ್ಯೆಗಳು ಇಂದಿನ ದಿನಗಳಲ್ಲಿ ಒಂದು ವಿವಾಹಕ್ಕೆ ಎದುರಾಗುತ್ತವೆ. ಇಲ್ಲೊಂದು ಮದುವೆಯಲ್ಲಿ ವರ ಅಕ್ಕನನ್ನು ಮದುವೆಯಾಗಲು ತಯಾರಿ ನಡೆಸಿ ತಂಗಿಯನ್ನು ವಿವಾಹವಾಗಿದ್ದಾನೆ.

ಮದುಮಗಳ ಸಹೋದರಿ ಸಾಯುವುದಾಗಿ ಬೆದರಿಕೆಯೊಡ್ಡಿದ ಹಿನ್ನೆಲೆಯಲ್ಲಿ ಹೆದರಿದ ವರ ತನಗೆ ನಿಶ್ಚಯವಾಗಿದ್ದ ಮದ್ವೆ ರದ್ದು ಮಾಡಿ ಆಕೆಯ ಸಹೋದರಿಯನ್ನು ಮದ್ವೆಯಾಗಲು ಮುಂದಾಗಿದ್ದಾನೆ. ವರನ ಈ ನಿರ್ಧಾರವೂ ಮದುವೆಗೆ ಬಂದ ಅತಿಥಿಗಳು ಹಾಗೂ ಸಂಬಂಧಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಈ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

ಇದರಿಂದಾಗಿ ವರ ಮದ್ವೆಯನ್ನೇ ಅರ್ಧದಲ್ಲೇ ಬಿಟ್ಟು ಹೊರಟು ಹೋಗಿದ್ದಾನೆ. ವಧುವಿನ ಸಹೋದರಿ ನಾನು ಪರಸ್ಪರ ಪ್ರೀತಿಸುತ್ತಿರುವುದಾಗಿ ವರ ಹೇಳಿಕೊಂಡಿದ್ದಾನೆ. ಎರಡು ಕುಟುಂಬದವರ ಮಧ್ಯೆ ಜಗಳವಾಗಿದೆ.

ವರ ಬಿಹಾರದ ಛಪ್ರಾ ನಿವಾಸಿಯಾಗಿದ್ದು, ಹತ್ತಿರದ ಗ್ರಾಮವೊಂದರ ಯುವತಿಯೊಂದಿಗೆ ಮೇ.2 ರಂದು ಮದುವೆ ನಿಶ್ಚಯವಾಗಿತ್ತು. ಅದರಂತೆ ಮದುವೆಯ ವಿಧಿವಿಧಾನಗಳೆಲ್ಲವೂ ನಡೆಯುತ್ತಿತ್ತು. ಆದರೆ ಈ ಮಧ್ಯೆ ವರನಿಗೆ ವಧುವಿನ ಸಹೋದರಿ ಕರೆ ಮಾಡಿದ್ದು, ಈ ಮದ್ವೆ ಮುಂದುವರೆದರೆ ತಾನು ಕಟ್ಟಡದಿಂದ ಬಿದ್ದು ಸಾಯುವುದಾಗಿ ಬೆದರಿಸಿದ್ದಾಳೆ.

ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರ ಬಂದು ವಿಚಾರಿಸಿದಾಗ ಈ ವೇಳೆ ವರ, ತನಗೆ ಈ ಮದುವೆ ನಿಶ್ಚಯವಾಗುವ ಮೊದಲೇ ವಧುವಿನ ಸಹೋದರಿಯ ಪರಿಚಯವಿತ್ತು. ಇಬ್ಬರು ಪ್ರೀತಿ ಮಾಡುತ್ತಿದ್ದೇವು. ಆದರೆ ಈ ಮಧ್ಯೆ ಆಕೆಯ ಸಹೋದರಿಯೊಂದಿಗೆ ಮದುವೆ ನಿಶ್ಚಯವಾಗಿತ್ತು. ನಂತರ ಅವಳು ಮದುವೆ ನಿಲ್ಲಿಸು ಎಂದು ಹೇಳುತ್ತಿದ್ದಳು. ಇಂದು ಅವಳು ಸಾಯುವುದಾಗಿ ಹೇಳಿದ್ದಾಳೆಂದು ಹೇಳಿದ್ದಾನೆ. ಈ ಘಟನೆಯನ್ನು ಸಂಪೂರ್ಣವಾಗಿ ಅರಿತ ಎರಡು ಕುಟುಂಬಗಳು ನಂತರ ವಧುವಿನ ಸಹೋದರಿಯೊಂದಿಗೆಯೇ ವರನ ಮದುವೆ ಮಾಡಲು ನಿರ್ಧರಿಸಿದ್ದಾರೆ.