ಸಿನಿಮಾ

ಪ್ರಧಾನಿ ಮೋದಿ ರೋಡ್ ಶೋಗೆ ಕ್ಷಣಗಣನೆ: ತುಂತುರು ಮಳೆ ಮಧ್ಯೆಯೇ ಜಮಾಯಿಸಿದ ಜನರು

ಬೆಂಗಳೂರು: ತುಂತುರು ಮಳೆಯ ಮಧ್ಯೆ ಪ್ರಧಾನಿ ಮೋದಿ ನೋಡಲು ಮತ್ತು ಅವರ ರೋಡ್ ಶೋ ವೈಭವ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಜನರು ರಸ್ತೆಗೆ ಇಳಿದಿದ್ದಾರೆ.

ಇಂದು ಪ್ರಧಾನಿ ಮೋದಿ ಅವರ ಮತ್ತೊಂದು ರೋಡ್​ ಶೋ ಬೆಂಗಳೂರಿನಲ್ಲಿ ಇನ್ನು ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ. ಈಗಾಗಲೇ ರೋಡ್​ ಶೋ ನಡೆಯುವ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಬಿಜೆಪಿ ಕಾರ್ಯಕರ್ತರ ಜಯ ಘೋಷಗಳ ಮೊಳಗು, ಹಲವು ತಂಡಗಳ ಕಲಾ ಪ್ರದರ್ಶನದ ಜನತೆಗೆ ವಾರದ ರಜೆಯು ರೋಡ್​ ಶೋಗೆ ಹೊಸ ಮೆರುಗು ತಂದುಕೊಟ್ಟಿದೆ.

ಇದನ್ನೂ ಓದಿ: ಮೋದಿ ರೋಡ್ ಶೋ ಬಳಿ ಅನುಮಾನಾಸ್ಪದವಾಗಿ ಎಲೆಕ್ಟ್ರಿಕಲ್ ಸಾಮಗ್ರಿ ನಿಂತುಕೊಂಡಿದ್ದ ವ್ಯಕ್ತಿ; ಮುಂದೇನಾಯ್ತು?

ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ

ಹೆಲಿಕಾಪ್ಟರ್ ಬದಲು ರಸ್ತೆ ಮಾರ್ಗವಾಗಿ ರೋಡ್ ಶೋ ಸ್ಥಳ ತಲುಪಲಿರುವ ಪ್ರಧಾನಿ ಮೋದಿ. ಹೊಸ ತಿಪ್ಪಸಂದ್ರ ರಸ್ತೆಯಿಂದ ರೋಡ್​ ಶೋ ಪ್ರಾರಂಭಿಸಲಿದ್ದಾರೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ ಶೋ ಆರಂಭಿಸಲಿರುವ ಮೋದಿ ಮತ್ತೊಂದು ಸಂದೇಶ ಸಾರಲಿದ್ದಾರೆ. ರಾಜಧಾನಿಯಲ್ಲಿ ಮತ ಶಿಕಾರಿಗೆ ಮತ್ತೊಂದು ಕೊನೆಯ ಪ್ರಯತ್ನ ಮಾಡಲಿದ್ದಾರೆ.

ಇಂದು ಹತ್ತು ಗಂಟೆಗೆ ಬೆಮೆಲ್ ಸರ್ಕಲ್​​ನಿಂದ ರೋಡ್ ಶೋ ಪ್ರಾರಂಭವಾಗಲಿದೆ. ನ್ಯೂ ತಿಪ್ಪಸಂದ್ರ ರಸ್ತೆ ಮೂಲಕ 80 ಫೀಟ್ ರೋಡ್, ಇಂದಿರಾನಗರ 12ನೇ ಮುಖ್ಯ ರಸ್ತೆ, 100 ಫೀಟ್ ರೋಡ್​, ಸಿ.ಎಂ.ಹೆಚ್ ರೋಡ್, ಎಸ್.ವಿ. ರೋಡ್ ಮೂಲಕ ಹಲಸೂರು ಪೊಲೀಸ್ ಠಾಣೆ ಮುಂದೆಯಿಂದ ಟ್ರಿನಿಟಿ ಜಂಕ್ಷನ್ ತೆರಳಿ ಅಲ್ಲಿ ರೋಡ್​ ಶೋ ಅಂತ್ಯವಾಗಲಿದೆ.

ಭಾರೀ ಭದ್ರತೆ

ರೋಡ್​ಗೆ ಭಾರೀ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ. ಭದ್ರತೆಗೆ ಒಟ್ಟು ಎರಡು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಸಂಚಾರಿ ವಿಶೇಷ ಆಯುಕ್ತ ಸಲೀಂ, ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್, ಜಂಟಿ ಆಯುಕ್ತರಾದ ಡಾ. ಶರಣಪ್ಪ, ಅನುಚೇತ್, ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಹಾಗೂ ಈಶಾನ್ಯ ವಿಭಾಗ ಡಿಸಿಪಿ ಲಕ್ಷ್ಮಿ ಪ್ರಸಾದ್ ನೇತೃತ್ವದಲ್ಲಿ ಭದ್ರತೆ ಏರ್ಪಡಿಸಲಾಗಿದೆ. ಇಪತ್ತು ಮಂದಿ ಎಸಿಪಿ ಮತ್ತು 60 ಇನ್​ಸ್ಪೆಕ್ಟರ್​ಗಳು ಸೇರಿ ಒಟ್ಟು ಎರಡು ಸಾವಿರ ಪೊಲೀಸ್​ ಸಿಬ್ಬಂದಿ ಪ್ರಧಾನಿ ಮೋದಿ ರಕ್ಷಣೆಗೆ ಸರ್ಪಗಾವಲಾಗಿ ಇರಲಿದ್ದಾರೆ.

ಇದನ್ನೂ ಓದಿ: ಯಾರ ಪಾಲಾಗಲಿದೆ ಸಕ್ಕರೆ ನಾಡಿನ ಸಿಹಿ? ಭದ್ರಕೋಟೆ ಉಳಿಸಿಕೊಳ್ಳಲು ಕೈ, ದಳ ಕಸರತ್ತು, ಕಮಲ ಪಾಳಯ ಪ್ರದರ್ಶಿಸಲಿದೆಯೇ ತಾಕತ್ತು?

ನಿನ್ನೆ (ಮೇ. 6) ಜೆಪಿ ನಗರದ ಸೋಮೇಶ್ವರ ಸಭಾಭವನದಿಂದ ಆರಂಭವಾದ ರೋಡ್​ ಶೋ ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಕೊನೆಯಾಯಿತು.

ಬೆಂಗಳೂರಲ್ಲಿಂದು ಪ್ರಧಾನಿ ಮೋದಿಯಿಂದ ಮತ್ತೊಂದು ರೋಡ್ ಶೋ: ಪೊಲೀಸರಿಂದ ಬಿಗಿ ಭದ್ರತೆ

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಬೇಕು: ಶಶಿ ತರೂರ್

Latest Posts

ಲೈಫ್‌ಸ್ಟೈಲ್