Patna: ಬಿಹಾರದ ವಿಧಾನಸಭಾ ಚುನಾವಣೆಗೆ (Bihar Election) ಭಾಗಲ್ಪುರ ಕ್ಷೇತ್ರದಿಂದ ಇನ್ನೇನು ನಾಮಪತ್ರ ಸಲ್ಲಿಸಬೇಕಿತ್ತು, ಅಷ್ಟರಲ್ಲಿಯೇ ನಾಟಕೀಯ ತಿರುವೊಂದರಲ್ಲಿ, ಮಾಜಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಪುತ್ರ ಅರ್ಜಿತ್ ಶಾಶ್ವತ್ ಚೌಬೆ, ಚುನಾವಣೆಗೆ ಸ್ಪರ್ಧಿಸುವ ತೀರ್ಮಾನದಿಂದ ಹಿಂದೆ ಸರಿದಿದ್ದಾರೆ.
ಶನಿವಾರ (ಅ 18) ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ್ದ 43 ವರ್ಷದ ಅರ್ಜಿತ್ ಫೋನ್ ರಿಂಗಾಗುತ್ತಿದ್ದಂತೆ ಅವರ ಬೆಂಬಲಿಗರು ಮತ್ತು ಮಾಧ್ಯಮದವರು ಸುತ್ತುವರೆದಿದ್ದರು. ಸಣ್ಣ ಮತ್ತು ಸ್ಪಷ್ಟವಾದ ಸಂಭಾಷಣೆಯ ಬಳಿಕ ಕೆಲವೇ ನಿಮಿಷದಲ್ಲಿ ನಾಮಪತ್ರ ಸಲ್ಲಿಕೆ ಕೇಂದ್ರದ ಆವರಣ ತೊರೆದಿದ್ದು, ಅಲ್ಲಿದ್ದವರ ಹುಬ್ಬೇರುವಂತೆ ಮಾಡಿತು.
ಇದನ್ನೂ ಓದಿ:ದೀಪಾವಳಿ ಹಬ್ಬದ ದಿನ ಈ 3 ತಪ್ಪುಗಳನ್ನು ಮಾಡಿದರೆ, ಲಕ್ಷ್ಮೀ ದೇವಿಯು ನಿಮ್ಮ ಮನೆಯಿಂದ ಹೊರಹೋಗುತ್ತಾಳೆ..Astrology
ಇದಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಚೌಬೆ, ತಮ್ಮ ಹಠಾತ್ ಯು-ಟರ್ನ್ ಬಗ್ಗೆ ವಿವರಣೆ ನೀಡಿದರು. ನಾಮಪತ್ರ ಸಲ್ಲಿಸಲು ತೆರಳುವ ಮಾರ್ಗ ಮಧ್ಯೆ ತಂದೆಯಿಂದ ಬಂದ ಕರೆ ನನ್ನ ಮನಸ್ಸನ್ನು ಪರಿವರ್ತಿಸಿತು, ನನ್ನ ತಂದೆ, ನೀನು ಬಿಜೆಪಿಯಲ್ಲಿದ್ದಿ, ಬಿಜೆಪಿಯಲ್ಲಿಯೇ ಮುಂದುವರೆಯುತ್ತಿ ಎಂದರು, ಆದ್ದರಿಂದ ತಂದೆಯ ನಿರ್ದೇಶನವನ್ನು ಮಗನಾಗಿ ಗೌರವಿಸಬೇಕಿರುವುದು ನನ್ನ ಕರ್ತವ್ಯ, ಹಾಗಾಗಿ ನಾಮಪತ್ರ ಸಲ್ಲಿಕೆಯಿಂದ ಹಿಂದೆ ಸರಿದು, ಪಕ್ಷದ ರೇಖೆಯ ವಿರುದ್ಧ ದಂಗೆ ಏಳದಿರಲು ನಿರ್ಧರಿಸಿದೆ ಎಂದು ಹೇಳಿದರು.
ಭಾಗಲ್ಪುರಕ್ಕೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರ ಘೋಷಿಸಿದಾಗಿನಿಂದ ಬಿಜೆಪಿಯ ಅನೇಕ ಹಿರಿಯ ನಾಯಕರು ತುಂಬಾ ಒತ್ತಡ ಹೇರಿದರು ಎಂದು ಇದೇ ವೇಳೆ ತಿಳಿಸಿದರು. ನನ್ನ ತಂದೆ, ತಾಯಿ ನನ್ನೊಂದಿಗೆ ಮಾತನಾಡಿದರು. ನಾನು ಚುನಾವಣಾ ಕಣದಿಂದ ಹಿಂದೆ ಸರಿಯಬೇಕೆನ್ನುವುದು ಬಿಜೆಪಿಯ ನಾಯಕರ ಸೂಚನೆಯಾಗಿತ್ತು, ಹೀಗಿದ್ದಾಗ ನಾನು ಅವರಿಗೆ ಅವಿಧೇಯನಾಗಲು ಸಾಧ್ಯವೇ?. ನನ್ನ ಪಕ್ಷವೇ ಇರಲಿ, ದೇಶವೇ ಇರಲಿ ಅದರ ವಿರುದ್ಧ ನಾನು ದಂಗೆ ಏಳಲು ಸಾಧ್ಯವಿಲ್ಲ ಎಂದರು. ಚೌಬೆ ಅವರ ಈ ನಡೆ ಬಿಜೆಪಿ ಬಗ್ಗೆ ಪಕ್ಷದ ಸದಸ್ಯರಿಗಿರುವ ಆಂತರಿಕ ಶಿಸ್ತನ್ನು ಒತ್ತಿಹೇಳುತ್ತದೆ.
ಇದನ್ನೂ ಓದಿ:ಕನ್ಹೇರಿ ಶ್ರೀ ವಿರುದ್ಧ ಕೇಸ್ ದಾಖಲಿಸಿ
ಭಾಗಲ್ಪುರವು ಚೌಬೆ ಕುಟುಂಬಕ್ಕೆ ಬಹಳ ಹಿಂದಿನಿಂದಲೂ ರಾಜಕೀಯವಾಗಿ ಮಹತ್ವದ ಕ್ಷೇತ್ರವಾಗಿದ್ದು, ಅಶ್ವಿನಿ ಚೌಬೆ 1995 ರಿಂದ 2010 ರವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರರು ಮತ್ತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. 2025 ವಿಧಾನಸಭಾ ಚುನಾವಣೆಗೆ ತನ್ನ ಪಟ್ಟಿ ಪ್ರಕಟಿಸಿದ ಬಿಜೆಪಿ, ರೋಹಿತ್ ಪಾಂಡೆಗೆ ಟಿಕೆಟ್ ನೀಡಿತು. ಪಕ್ಷದ ಈ ನಿರ್ಧಾರದಿಂದ ಚೌಬೆ ಕುಟುಂಬಕ್ಕೆ ನಿಷ್ಠರಾಗಿರುವ ಸ್ಥಳೀಯ ಕಾರ್ಯಕರ್ತರು ತಮ್ಮ ಅಸಮಾಧಾನ ಹೊರಹಾಕಿದುರು.
2025 ರ ಬಿಹಾರ ವಿಧಾನಸಭಾ ಚುನಾವಣೆ ನವೆಂಬರ್ 6 ಮತ್ತು ನವೆಂಬರ್ 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು. ನವೆಂಬರ್ 14 ರಂದು ಫಲಿತಾಂಶ ಹೊರಬೀಳಲಿದೆ.(ಏಜೆನ್ಸೀಸ್)