Bihar : ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ದಿವಂಗತ ತಾಯಿ ಹೀರಾಬೆನ್ ಮೋದಿಯನ್ನು ಹೋಲುವಂತಹ ಪಾತ್ರಗಳನ್ನು ಕೃತಕ ಬುದ್ಧಿಮತ್ತೆ ಆಧಾರದಲ್ಲಿ ಸೃಷ್ಟಿಸಿ ಅವರ ಕನಸಿನಲ್ಲಿ ತಾಯಿ ಹೀರಾಬೆನ್ ಮಾತನಾಡುತ್ತಿರುವಂತಹ ದೃಶ್ಯವನ್ನು ಬಿಹಾರ ಕಾಂಗ್ರೆಸ್ ತನ್ನ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಿದ ನಂತರ, ಈ ವಿಡಿಯೋ ರಾಜಕೀಯವಾಗಿ ಬಿರುಗಾಳಿ ಎಬ್ಬಿಸಿದೆ. ಇನ್ನು ಈ ವಿಡಿಯೋ 36 ಸೆಕೆಂಡ್ಗಳ ಕ್ಲಿಪ್ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದ್ದು, ಚುನಾವಣೆಯ ಮುಂಚಿತವಾಗಿ ಈ ರೀತಿ ಮಾಡುತ್ತಿರುವುದು ವೈಯಕ್ತಿಕ ದಾಳಿ ಎಂದು ಬಿಜೆಪಿ ಆರೋಪಿಸಿದೆ.
"ಸಾಹೇಬರ ಕನಸಿನಲ್ಲಿ ತಾಯಿ ಕಾಣಿಸಿಕೊಳ್ಳುತ್ತಿದ್ದಾರೆ" ಎಂಬ ಶೀರ್ಷಿಕೆಯೊಂದಿಗೆ ಕಾಂಗ್ರೆಸ್ ವಿಡಿಯೋವನ್ನು ಜಾಲತಾಣಗಳಲ್ಲಿ ಹರಡಿತ್ತು. ಇದು ಬಿಹಾರದಲ್ಲಿ ನಡೆಯುತ್ತಿರುವ ಚುನಾವಣೆಯ ನಡುವೆಯೇ ಈ ವಿಡಿಯೋ ಬಂದಿದ್ದು, ಮೋದಿಯವರ ಭಾವನೆಗೆಳಿಗೆ ನೋವುಂಟು ಮಾಡುವಂತಹ ಕೆಲಸವನ್ನು ಮಾಡಿದ್ದಾರೆ. ಹಾಗಾಗಿ ಇವರು ಕ್ಷಮೆಯಾಚಿಸಬೇಕು ಹಾಗೇ ಇದಕ್ಕೆ ಕಾರಣವಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿದೆ.
ಇದನ್ನೂ ಓದಿ: ಅಮೆರಿಕದಲ್ಲಿ ಕನ್ನಡಿಗನ ಶಿರಚ್ಛೇದ! ಕುಟುಂಬದ ಕಣ್ಣೆದುರೇ ಬರ್ಬರ ಕಗ್ಗೊಲೆ, ಇಲ್ಲಿದೆ ಘಟನೆಯ ಪೂರ್ಣ ಮಾಹಿತಿ | Indian Man
ಈ ವಿಡಿಯೋ ಖಂಡಿಸಿ, ಬಿಜೆಪಿ ಸಂಸದ ರಾಧಾ ಮೋಹನ್ ದಾಸ್ ಅಗರ್ವಾಲ್ ಮಾತನಾಡಿದ್ದು, ಪ್ರಧಾನಿ ಯಾವಾಗಲೂ ರಾಜಕೀಯ ಮತ್ತು ಕುಟುಂಬವನ್ನು ಪ್ರತ್ಯೇಕವಾಗಿ ಇಟ್ಟಿದ್ದಾರೆ. ಕಾಂಗ್ರೆಸ್ ಪ್ರಧಾನಿ ಮೋದಿಯವರ ತಾಯಿಯನ್ನು ಮೊದಲು ಅವಮಾನಿಸಿದ್ದು, ಈಗ ಡೀಪ್ಫೇಕ್ ತಂತ್ರವನ್ನು ಬಳಸಿಕೊಂಡು ದೇಶವನ್ನು ದಾರಿ ತಪ್ಪಿಸುವಂತಹ ಕೆಲಸವನ್ನು ಮಾಡುತ್ತಿದೆ. ಇದು ಎಲ್ಲಾ ತಾಯಂದಿರನ್ನು ಅವಮಾನಿಸುತ್ತಿರುವುದು ನೋವಿನ ಸಂಗತಿ ಎಂದು ಹೇಳಿದ್ದಾರೆ.
ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲಾ ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಈ ಪಕ್ಷವು ಎಲ್ಲಾ ಮಿತಿಗಳನ್ನು ಮೀರುತ್ತಿದೆ. ಪ್ರಧಾನಿಯವರ ತಾಯಿಯನ್ನು ನಿಂದಿಸಿದಕ್ಕೆ ಪಶ್ಚತ್ತಾಪ ಪಡುವ ಬದಲು, ಆರೋಪಿಗಳನ್ನು ಸಮರ್ಥಿಸಿಕೊಳ್ಳುತ್ತಿದೆ. ಈ ಪಕ್ಷವು ಗಾಂಧಿವಾದಿಯ ಬದಲು "ಗಾಳಿವಾಡಿ"ಯಾಗಿದೆ. ಇದು ಅವರಿಗೆ ನಾಚೀಕೆಗೀಡಿನ ಸಂಗತಿ ಎಂದು ಪೋಸ್ಟ್ ಮಾಡಿದ್ದಾರೆ.
ಹೀರಾಬೆನ್ ಮೋದಿಯವರ ಹೆಸರನ್ನು ರಾಜಕೀಯ ವಿವಾದಕ್ಕೆ ಸಿಲುಕಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಆಗಸ್ಟ್ 27 ರಂದು ಧರ್ಬಾಂಗದಲ್ಲಿ ಕಾಂಗ್ರೆಸ್ ಮತ್ತು ಆರ್ಜೆಡಿ ನೇತೃತ್ವದ 'ಮತದಾರರ ಅಧಿಕಾರ ಯಾತ್ರೆ'ಯ ಸಂದರ್ಭದಲ್ಲಿ, ಪ್ರಧಾನಿ ಹಾಗೂ ಅವರ ತಾಯಿಯ ವಿರುದ್ಧ ನಿಂದನೀಯ ಘೋಷಣೆಗಳನ್ನು ವೇದಿಕೆಯಿಂದ ಕೂಗಿರುವ ಪ್ರಕರಣ ದಾಖಲಾಗಿತ್ತು.
ಇದಕ್ಕೆ ಬೇಸರ ವ್ಯಕ್ತಪಡಿಸಿದ ಮೋದಿಯವರು, ಈ ಘಟನೆಯು ದೇಶದ ಎಲ್ಲಾ ತಾಯಂದಿರು, ಸಹೋದರಿಯರು ಮತ್ತು ಹೆಣ್ಣು ಮಕ್ಕಳಿಗೆ ಮಾಡಿದ ಅವಮಾನ. ಇದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ನಿವೃತ್ತಿಯ ಚರ್ಚೆಯ ನಡುವೆ ವಿಡಿಯೋ ಪೋಸ್ಟ್ ಮಾಡಿ ಎಲ್ಲವನ್ನೂ ಸ್ಪಷ್ಟಪಡಿಸಿದ ರೋಹಿತ್ ಶರ್ಮಾ! Rohit Sharma
ಆ ಘಟನೆಯಾದ ಬಳಿಕ, ಪೋಸ್ಟ್ ವಿರುದ್ಧ ಬಿಹಾರದಲ್ಲಿ ಎನ್‌ಡಿಎಯ ಮಹಿಳಾ ಘಟಕವು 5 ಗಂಟೆಗಳ ಬಂದ್‌ಗೆ ಕರೆ ನೀಡಿತು. ಇನ್ನು ಈ ಹೇಳಿಕೆಗಳು ರಾಜ್ಯಾದ್ಯಂತ ಮಹಿಳೆಯರ ಘನತೆಗೆ ಮಾಡಿದ ಅವಮಾನ ಮಾಡಿದೆ ಎಂದು ಉಲ್ಲೇಖಸಿದೆ. ಈ ಕೂಡಲೇ ಕಾಂಗ್ರೆಸ್ನವರು ಕ್ಷಮೆಯಾಚಿಸಬೇಕು ಎಂದು ಪ್ರತಿಭಟನೆ ನಡೆಸಿದ್ದಾರೆ. (ಏಜೆನ್ಸೀಸ್)