ನ್ಯೂಸ್

ಗಿಫ್ಟ್​ ಕೊಡೋ ಟೈಮ್​ ಅಲ್ಲಿ ಹೊರಬಿತ್ತು ಮನಸಿನ ಮಾತು; BiggBoss ಮೆನಯಿಂದ ಎಲಿಮಿನೇಟ್​ ಆಗಿದ್ದು ಇವರೇ ನೋಡಿ

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (BiggBoss) ಆರಂಭವಾಗಿ 13 ವಾರಗಳು ಕಳೆದಿದ್ದು, ವಾರ ಕಳೆದಂತೆ ಕಾರ್ಯಕ್ರಮವು ರೋಚಕತೆ ಸೃಷ್ಟಿಸುತ್ತ ಹೋಗುತ್ತಿದೆ. ಶನಿವಾರದ ಸಂಚಿಕೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ನಲ್ಲಿ ನಡೆದ ಮೋಸದಾಟಕ್ಕೆ ಸಂಬಂಧಿಸಿದಂತೆ ನಿರೂಪಕ ಸುದೀಪ್ ಕಿಚ್ಚನ ಚಪ್ಪಾಳೆಯನ್ನು ಧನರಾಜ್​ ಅವರಿಗೆ ನೀಡಿ ಮನೆಮಂದಿಗೆ ಸಖತ್ ಕ್ಲಾಸ್​ ತೆಗೆದುಕೊಂಡಿದ್ದರು. ಇಂದು ಕೂಡ ಅದು ಮಂದುವರೆಯುತ್ತದೆ ಎಂದು ಹೇಳಲಾಗಿದ್ದು, ವೀಕ್ಷಕರು ಇಂದಿನ ಸಂಚಿಕೆಗಾಗಿ ಎದುರು ನೋಡುತ್ತಿದ್ದಾರೆ.

ಈಗ ಗಿಫ್ಟ್ ಕೊಡೋ ಟೈಮ್! ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನಿರೂಪಕ ಕಿಚ್ಚ ಸುದೀಪ್​ ಅವರು ಮನೆ ಮಂದಿಗೆ ಹೊಸ ವರ್ಷಕ್ಕೆ ನಿಮ್ಮ ಒಂದು ಪರ್ಸನಲ್​ ವಸ್ತುವನ್ನ ಮನೆಯ ಸದಸ್ಯರೊಬ್ಬರಿಗೆ ಗಿಫ್ಟ್​ ಕೊಡುವಂತೆ ಹೇಳುತ್ತಾರೆ. ಅದರಂತೆ ಸ್ಫರ್ಧಿಗಳು ತಮ್ಮಿಷ್ಟದ ವಸ್ತುಗಳನ್ನು ಮನೆಮಂದಿಗೆ ಗಿಫ್ಟ್ ಕೊಡುತ್ತಾರೆ.

ತ್ರಿವಿಕ್ರಮ್​ಗೆ ಭವ್ಯಾ ತಮ್ಮ ಇಷ್ಟದ ವಸ್ತುವನ್ನು ಗಿಫ್ಟ್​ ಕೊಟ್ಟು ಈ ವ್ಯಕ್ತಿ ನೋಡುವುದಕ್ಕೆ ಹಾರ್ಷ್​ ಎನಿಸಿದರು ತುಂಬಾ ಸ್ವೀಟ್​ ಎಂದು ಹೇಳುತ್ತಾರೆ. ಅರ್ಥ ಮಾಡಿಕೊಳ್ಳೋದು ಕಷ್ಟ ಎಂದು ಹೇಳುವ ಭವ್ಯಾ ಬಳಿಕ ದೂರ ಆಗೋದು ಕಷ್ಟ ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುವ ನಿರೂಪಕ ಕಿಚ್ಚ ಸುದೀಪ್​ ಎಂಥಾ ಸರ್ಪೈಸ್​ ಅಲ್ವಾ ಎಂದು ಹೇಳುತ್ತಾರೆ. ಬಳಿಕ ಎಕ್ಸ್​ಪ್ರೆಷನ್​ ಮೂಲಕವೇ ಪ್ರತಿಕ್ರಿಯಿರುತ್ತಾರೆ. ಸದ್ಯ ಈ ಪ್ರೋಮೋ ವೈರಲ್​ ಆಗಿದ್ದು, ವೀಕ್ಷಕರು ಸಂಚಿಕೆಗಾಗಿ ಪ್ರಸಾರವಾಗುವುದನ್ನು ಎದುರು ನೋಡುತ್ತಿದ್ದಾರೆ.

ಇನ್ನೂ ಎಲಿಮಿನೇಷನ್​ ವಿಚಾರಕ್ಕೆ ಬರುವುದಾದರೆ ಈ ವಾರ ಡಬಲ್​ ಎಲಿಮಿನೇಷನ್​ ನಡೆಯುತ್ತದೆ ಎಂದು ಹೇಳಲಾಗಿದ್ದು, ಐಶ್ವರ್ಯಾ ಶಿಂಧೋಗಿ ಎಲಿಮಿನೇಟ್​ ಆಗಿರುವುದಾಗಿ ವರದಿಯಾಗಿದೆ. ಇವರ ಜೊತೆ ಇನ್ನೋರ್ವ ಸ್ಫರ್ಧಿ ಯಾರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಗೌತಮಿ ಅಥವಾ ಚೈತ್ರಾ ಎಲಿಮಿನೇಟ್​ ಆಗಿದ್ಧಾರೆ ಎಂದು ಹೇಳಲಾಗಿದ್ದು, ಇನ್ನಷ್ಟೇ ಅಧಿಕೃತವಾಗಬೇಕಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.