ಬೆಂಗಳೂರು: ಕನ್ನಡದ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ (BiggBoss) ಆರಂಭವಾಗಿ 13ನೇ ವಾರಕ್ಕೆ ಕಾಲಿಟ್ಟಿದ್ದು, ವಾರ ಕಳೆದಂತೆ ಕಾರ್ಯಕ್ರಮ ರೋಚಕತೆ ಹೆಚ್ಚಿಸುತ್ತಲೇ ಹೋಗುತ್ತಿದೆ. ಇನ್ಣೂ ಈ ವಾರದ ಟಾಸ್ಕ್ ವಿಚಾರಕ್ಕೆ ಬರುವುದಾದರೆ ಬಿಗ್ಬಾಸ್ ಮನೆಯನ್ನು ರೆಸಾರ್ಟ್ ಆಗಿ ವಿಂಗಡಿಸಲಾಗಿದ್ದು, ಎರಡು ತಂಡಗಳಾಗಿ ಮಾಡಲಾಗಿದೆ. ಇನ್ನೂ ಟಾಸ್ಕ್ನ ವಿಚಾರಕ್ಕೆ ಬರುವುದಾದರೆ ಸ್ಫರ್ಧಿಗಳು ನಾ ಮುಂದು, ತಾ ಮುಂದು ಎಂಬಂತೆ ಪ್ರದರ್ಶನವನ್ನು ನೀಡುತ್ತಿದ್ದು, ಈ ವಾರದ ಟಾಸ್ಕ್ನಲ್ಲೂ ಅದೇ ನಡೆದಿದೆ.
ಇನ್ನೂ ಎಲಿಮಿನೇಷನ್ ಪ್ರಕ್ರಿಯೆಗೆ ಬರುವುದಾದರೆ ಬಿಗ್ಬಾಸ್ (BiggBoss) ಬಿಬಿ ಅಡ್ಡ ಎಂಬ ಹೊಸ ಆಲೋಚನೆಯೊಂದಿಗೆ ಈ ವಾರದ ನಾಮಿನೇಷನ್ ಟಾಸ್ಕ್ ನೀಡಲಾಗಿದ್ದು, ಸ್ಫರ್ಧಿಗಳು ತಾವು ನಾಮಿನೇಟ್ ಮಾಡುವ ಸದಸ್ಯರ ಹೆಸರು ಹೇಳಿ ಅವರ ತಲೆಯ ಮೇಲೆ ಬಾಟಲ್ನಲ್ಲಿ ಹೊಡೆಯಬೇಕಾಗುತ್ತದೆ. ಈ ವೇಳೆ ಸ್ಪರ್ಧಿ ರಜತ್, ಚೈತ್ರಾ, ಮಂಜು ಹಾಗೂ ತ್ರವಿಕ್ರಮ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ.
ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ, ರಜತ್ ನಾಮಿನೇಷನ್ಗೆ ಚೈತ್ರಾ ಅವರ ಹೆಸರನ್ನು ಸೂಚಿಸುತ್ತಾರೆ. ಬಳಿಕ ಟಾಸ್ಕ್ ಸೇರಿದಂತೆ ಸೀರೆ ಹೊಗೆಯುವುದರಲ್ಲಿ ನಿಮ್ಮ ಟ್ಯಾಲೆಂಟ್ ಕಾಣಿಸಲಿಲ್ಲ. ಯಾವ ಕಾರಣಕ್ಕೆ ಬಿಗ್ಬಾಸ್ನಲ್ಲಿ ಇದ್ದೀರಾ ಮನೆಗೆ ಹೊರಡಿ ಎಂದು ಹೇಳುತ್ತಾರೆ. ಇದಕ್ಕೆ ಚೈತ್ರಾ ಕಿವಿಯಿಂದ ವಿಷ್ಯವನ್ನ ಹೊರಗೆ ಹಾಕುತ್ತಿರುವ ಸನ್ಹೆ ಮಾಡುತ್ತಾರೆ. ತ್ರಿವಿಕ್ರಮ್ ಹಾಗೂ ಮಂಜು ನಡುವೆ ಕ್ಯಾಪ್ಟನ್ಸಿ ವಿಚಾರವಾಗಿ ನಾಮಿನೇಷನ್ನಲ್ಲಿ ಮಾತಿನ ಚಕಮಕಿ ನಡೆಯಲಿದ್ದು, ನಮಗೂ ನಿಮ್ಮ ಕ್ಯಾರೆಕ್ಟರ್ ಬಗ್ಗೆ ತಿಳಿದಿದೆ ಎಂದು ತ್ರಿವಿಕ್ರಮ್ ಮಂಜುಗೆ ಹೇಳುತ್ತಾರೆ.
ಮನೆಮಂದಿಗೆ ನಿಜಕ್ಕೂ ಎಲ್ಲಾ ಕ್ಯಾರೆಕ್ಟರ್ಸ್ ಅರ್ಥವಾಗಿದ್ಯಾ? ಎಂಬ ಶೀರ್ಷಿಕೆಯಡಿ ಈ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದ್ದು, ಇಂದಿನ ಸಂಚಿಕೆ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಳೆದ ವಾರಾಂತ್ಯದಲ್ಲಿ ಚೈತ್ರಾರನ್ನು ಕಸಕ್ಕೆ ಹೋಲಿಸಿದ್ದ ಮನೆಯ ಸದಸ್ಯರು ಅವರ ಅವಶ್ಯಕತೆ ಬಿಗ್ಬಾಸ್ಗಿಲ್ಲ ಎಂದು ಹೇಳಿದ್ದರು. ಈ ವಾರಾಂತ್ಯದ ವೇಳೆಗೆ ಏನೆಲ್ಲಾ ಬೆಳವಣಿಗೆಯಾಗಲಿದೆ ಎಂದು ಕಾದು ನೋಡಬೇಕಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.