ನ್ಯೂಸ್

ಧರ್ಮಸ್ಥಳಕ್ಕೆ ಭೇಟಿ ನೀಡಿದ 'ಬಿಗ್​ಬಾಸ್ ವಿನ್ನರ್' ಮಂಜು ಪಾವಗಡ

ಮಂಗಳೂರು: ಕನ್ನಡ ಬಿಗ್​​​ ಬಾಸ್ ಸೀಸನ್ 8 ವಿನ್ನರ್ ಮಂಜು ಪಾವಗಡ ಕುಟುಂಬ ಸಮೇತರಾಗಿ ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇಷ್ಟ ದೇವರು ಮಂಜುನಾಥ ಸ್ವಾಮಿ ದರ್ಶನ ಪಡೆದ ಮಂಜು ಪಾವಗಡ, ನಂತರ ಧರ್ಮಸ್ಥಳ ಧರ್ಮಾಧಿಕಾರಿ‌ ಡಾ. ಡಿ. ವೀರೇಂದ್ರ ಹೆಗ್ಗಡೆ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಟ್ರೋಫಿ ಗೆದ್ದ ಬಳಿಕ ಮೊದಲ ಬಾರಿಗೆ ತಂದೆ-ತಾಯಿ ಮತ್ತು ಕುಟುಂಬಸ್ಥರ ಜೊತೆ ಧರ್ಮಸ್ಥಳ ಸನ್ನಿಧಿಗೆ ಬಂದು ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆದಿದ್ದಾರೆ. ಕುಟುಂಬಸ್ಥರ ಜೊತೆ ಮಜಾ ಭಾರತ ಕಾರ್ಯಕ್ರಮದ ಕೆಲ ಹಾಸ್ಯ ಕಲಾವಿದರು ಕೂಡ ಮಂಜುಗೆ ಸಾಥ್ ನೀಡಿದ್ದಾರೆ.

ಕನ್ನಡ ಬಿಗ್​​ ಬಾಸ್ 8ರಲ್ಲಿ ಘಟಾನುಘಟಿ ಸ್ಪರ್ಧಿಗಳ ಜೊತೆ ಹೋರಾಡಿ ಗೆಲುವಿನ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದ ಮಂಜು, ದೊಡ್ಮನೆ ಒಳಗಡೆ ನಗುವಿನ ರಸದೌತಣ ನೀಡುವ ಮೂಲಕ ವೀಕ್ಷಕರ ನೆಚ್ಚಿನ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು.