ನ್ಯೂಸ್

ಬಿಗ್​ಬಾಸ್​ ಆರಂಭಕ್ಕೆ ದಿನಗಣನೆ; ಮನೆಯಲ್ಲಿ ಧೂಳೆಬ್ಬಿಸ್ತಾರಾ ಈ ಸೆಲೆಬ್ರಿಟಿಗಳು?

Mandara

ಬೆಂಗಳೂರು: ಕನ್ನಡದ ಬಿಗ್​ಬಾಸ್​ ಸೀಸನ್​ 8 ಫೆಬ್ರವರಿ 28ರಂದು ಆರಂಭವಾಗಲಿದೆ. ಏಳೂ ಸೀಸನ್​ಗಳಲ್ಲಿ ವೀಕ್ಷಕರ ಮನಸ್ಸನ್ನು ಗೆದ್ದಿರುವ ಬಿಗ್​ಬಾಸ್​ ಬಗ್ಗೆ ಈ ಬಾರಿಯೂ ಎಂದಿನಂತೆ ಜನರು ಹೆಚ್ಚಿನ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಯಾರ್ಯಾರು ಮನೆಗೆ ಎಂಟ್ರಿ ತೆಗೆದುಕೊಳ್ಳವಲಿದ್ದಾರೆ ಎನ್ನುವವರ ಬಗ್ಗೆ ಭಾರೀ ಕುತೂಹಲವಿದೆ.

ಸದ್ಯಕ್ಕೆ ಕರ್ನಾಟಕದ ಕೆಲವು ಸೆಲೆಬ್ರಿಗಳ ಹೆಸರು ಬಿಗ್​ಬಾಸ್​ ಸ್ಪಧಿಗಳ ಪಟ್ಟಿಯಲ್ಲಿ ಕೇಳಿಬಂದಿದೆ. ಕಾಮಿಡಿ ಕಿಲಾಡಿಯಲ್ಲಿ ಎಲ್ಲರನ್ನು ನಕ್ಕು ನಲಿಸಿದ್ದ ನಯನಾ, ಸರಿಗಮಪಾ ಖ್ಯಾತಿಯ ಹನುಮಂತಣ್ಣ ರಿಯಾಲಿಟಿ ಸ್ಟಾರ್​ಗಳಾಗಿ ಮನೆಯೊಳಗೆ ಹೋಗುವ ಸಾಧ್ಯತೆಯಿದೆ. ಇನ್ನು ಧಾರಾವಾಗಿ ಸ್ಟಾರ್​ಗಳಾದ ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್​, ಮೂರುಗಂಟು ಧಾರಾವಾಹಿಯ ಸಮೀಕ್ಷಾ, ಅಗ್ನಿಸಾಕ್ಷಿಯ ಸುಕೃತಾ, ಅಮೃತವರ್ಷಿಣಿಯ ರಜಿನಿ ಹೆಸರು ಕೂಡ ಸಂಭಾವ್ಯ ಪಟ್ಟಿಯಲ್ಲಿದೆ. ಉಳಿದಂತೆ ಸ್ಯಾಂಡಲ್​ವುಡ್​ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಲೈಫ್​ 360 ಸಿನಿಮಾ ಖ್ಯಾತಿಯ ಅನುಶಾ ರಂಗನಾಥ್​ (ಅಶಿಕಾ ರಂಗನಾಥ್​ ಸಹೋದರಿ), ಕಿರಣ್​ ಶ್ರೀನಿವಾಸ್​, ಸುನಿಲ್​ ರಾವ್​, ತಬಲಾ ನಾಣಿ, ತರಂಗ ವಿಶ್ವ ಹಾಗೂ ನಿರ್ದೇಶಕ ರವಿ ಶ್ರೀವತ್ಸ ಹೆಸರೂ ಪಟ್ಟಿಯಲ್ಲಿದೆ. ಅವರ ಜತೆಯಲ್ಲಿ ರಘುವೈನ್​ ಸ್ಟಾರ್​ ಮೂಲಕ ಫೇಸ್​ಬುಕ್​ನಲ್ಲಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ರಘು ಗೌಡ ಹಾಗೂ ಲವ್​ ಗುರು ಖ್ಯಾತಿಯ ರಾಜೇಶ್​ ಹೆಸರೂ ಸೇರಿಕೊಂಡಿದೆ.

ಈ ಎಲ್ಲ ಕುತೂಹಲಕ್ಕೆ ಭಾನುವಾರ ಸಂಜೆ 6 ಗಂಟೆಗೆ ನಟ ಸುದೀಪ್​ ತೆರೆ ಎಳೆಯಲಿದ್ದಾರೆ. ಬಿಗ್​ ಬಾಸ್​ ಮನೆಗೆ ಹೋಗುವ ಸ್ಪರ್ಧಿಗಳನ್ನು ಈಗಾಗಲೇ ಕ್ವಾರಂಟೈನ್​ ಮಾಡಿಡಲಾಗಿದೆ ಎನ್ನುವ ಸುದ್ದಿಯೂ ಹರಿದಾಡಿದೆ. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ