ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್-11 (Bigg Boss Season-11) ಆರಂಭವಾಗಿದ್ದು, ಸ್ಫರ್ಧಿಗಳ ನಡುವಿನ ಕಿತ್ತಾಟಕ್ಕೆ ಹೆಚ್ಚು ಸುದ್ದಿಯಾಗುತ್ತಿದೆ. ಈ ಬಾರಿ ಸ್ವರ್ಗ-ನರಕ ಎಂಬ ಥೀಮ್ನಲ್ಲಿ ಮನೆಯನ್ನು ವಿಂಗಡಿಸಲಾಗಿದ್ದು, ಕಾರ್ಯಕ್ರಮ ಶುರುವಾದ ಬಳಿಕ ಲಾಯರ್ ಜಗದೀಶ್ ಒಂದಿಲ್ಲೊಂದು ಕಾರಣಕ್ಕೆ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಇದೀಗ ಬಿಗ್ಬಾಸ್ಗೆ ನೇರ ಸವಾಲು ಹಾಕುವ ಮೂಲಕ ಜಗದೀಶ್ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ನನಗೆ ಇಲ್ಲಿ ಇರೋಕೆ ಇಷ್ಟವಿಲ್ಲ. ನಾನು ಕ್ವಿಟ್ ಮಾಡುತ್ತೇನೆ. ನಾನು ಈ ಕ್ಷಣ ಮನಸ್ಸು ಮಾಡಿದರು ಇಲ್ಲಿಗೆ ಹೆಲಿಕಾಪ್ಟರ್ಅನ್ನು ತರಿಸುತ್ತೇನೆ ನನಗೆ ಆ ಕೆಪಾಸಿಟಿ ಇದೆ. ನಾನೇನಾದ್ರು ಆಚೆ ಹೋದ್ರೆ ಎಲ್ಲಾ ಎಕ್ಸ್ಪೋಸ್ ಆಗುತ್ತೆ. ಈ ಪ್ರೋಗ್ರಾಮ್ ಹಾಳು ಮಾಡಿಲ್ಲ ಅಂದ್ರೆ ನನ್ನ ಹೆಸರಿ ಕೇಳಿ. ಬಿಗ್ಬಾಸ್ ನಾನು ನಿಮ್ಮನ್ನು ಎಕ್ಸ್ಪೋಸ್ ಮಾಡುತ್ತೇನೆ. ಕರ್ನಾಟಕದಲ್ಲಿ ನನ್ನನ್ನು ಎದುರುಹಾಕಿಕೊಂಡು ಶೋ ನಡೆಸೋಕೆ ಆಗುತ್ತದೆ ಎಂದುಕೊಂಡಿದ್ದೀರಾ ಎಂದು ಲಾಯರ್ ಜಗದೀಶ್ ಬಿಗ್ಬಾಸ್ಗೆ ನೇರ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಒಬ್ಬ 16 ಜನರನ್ನು ಡಿಫೆಂಡ್ ಮಾಡ್ತಾನೆ, ನನ್ನನ್ನು ಹೊರಗೆ ಕಳಿಸೋದು ಬೆಸ್ಟ್; BiggBoss ತೊರೆಯುತ್ತಾರಾ ಲಾಯರ್ ಜಗದೀಶ್
ಕಲರ್ಸ್ ವಾಹಿನಿಯಲ್ಲಿ ಬಿಡುಗಡೆಯಾಗಿರುವ ಈ ಪ್ರೋಮೋಗೆ ಸಾಕಷ್ಟು ಟೀಕೆ ವ್ಯಕ್ತವಾಗಿದ್ದು, ನೆಟ್ಟಿಗರು ಜಗದೀಶ್ ಅವರನ್ನು ಟೀಕಿಸಿ ಕಮೆಂಟ್ ಹಾಕಿದ್ದಾರೆ. ಕೆಲವರು ವಾಹಿನಿ ಅವರನ್ನು ಕ್ಲಾಸ್ ತೆಗೆದುಕೊಂಡಿದ್ದು, ಅಂತಿಮವಾಗಿ ಇಂದಿನ ಸಂಚಿಕೆ ಪ್ರಸಾರವಾಗುವವರೆಗೂ ಕಾದು ನೋಡಬೇಕಿದೆ. ವಾರಾಂತ್ಯದಲ್ಲಿ ನಿರೂಪಕ ಕಿಚ್ಚ ಸುದೀಪ್ ಇದಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್ಬಾಸ್, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.