ನ್ಯೂಸ್

ಬಿಗ್ ಬಾಸ್​ ಸೀಸನ್​ 07ರ ಸ್ಪರ್ಧಿ ಕಾರು ಅಪಘಾತ! ಪ್ರಾಣಾಪಾಯದಿಂದ ನಟಿ ಪಾರು

ತೆಲಂಗಾಣ: ಬಿಗ್ ಬಾಸ್ ತೆಲುಗು ಸೀಸನ್ 7ರಲ್ಲಿ (BiggBoss Contestant) ತಮ್ಮ ಆಟದ ವೈಖರಿಯಿಂದಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ನಟಿ ಸುಭಾಶ್ರೀ ರಾಯಗುರು ಇಂದು ಮಧ್ಯಾಹ್ನ ನಾಗಾರ್ಜುನ ಸಾಗರ್ ಸಮೀಪ ತೆರಳುವಾಗ ಕಾರು ಅಪಘಾತಕ್ಕೀಡಾಗಿದೆ (Accident).

ವರದಿಗಳ ಪ್ರಕಾರ, ಸುಭಾಶ್ರೀ ಪ್ರಯಾಣಿಸುತ್ತಿದ್ದ ಕಾರಿಗೆ ವೇಗವಾಗಿ ಬರುತ್ತಿದ್ದ ಬೈಕ್​ವೊಂದು ಡಿಕ್ಕಿ ಹೊಡೆದಿದೆ. ಬೈಕ್​ನಲ್ಲಿದ್ದವರು ಮದ್ಯದ ಅಮಲಿನಲ್ಲಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಅಪಘಾತದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿದ್ದಾರೆ. ಕಾರಿನಲ್ಲಿದ್ದ ಸುಭಾಶ್ರೀ ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಕಾರಣ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಈ ವೇಳೆ ಬೈಕ್ ಸವಾರ ತಪ್ಪು ಮಾರ್ಗದಿಂದ ಬಂದು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ವರದಿಯಾಗಿದೆ. ಮೇಲ್ನೋಟಕ್ಕೆ ಸುಭಾಶ್ರೀ ಅವರ ತಪ್ಪೇನೂ ಇಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ನಾಗಾರ್ಜುನ ಸಾಗರ್ ಬಸ್ ಡಿಪೋ ಬಳಿ ಈ ಘಟನೆ ಸಂಭವಿಸಿದ್ದು, ಅಸಲಿಗೆ ಕಾರು ಸುಭಾಶ್ರೀ ಅವರದ್ದಲ್ಲ. ಚಿತ್ರೀಕರಣಕ್ಕಾಗಿ ತೆರಳುತ್ತಿದ್ದ ಕಾರಣ ಕಾರು ಪ್ರೊಡಕ್ಷನ್​ ಸಂಸ್ಥೆಯಿಂದ ಕಳಿಸಲಾಗಿತ್ತು ಎನ್ನಲಾಗಿದೆ,(ಏಜೆನ್ಸೀಸ್).