Bigg Boss: ಇನ್ನೇನು ಕೆಲವೇ ದಿನಗಳಲ್ಲಿ ನೀವೆಲ್ಲರೂ ಕಾಯುತ್ತಿದ್ದಂತ ಬಿಗ್ ಬಾಸ್ ತೆರೆಯ ಮೇಲೆ ಅಪ್ಪಳಿಸಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕಾರ್ಯಕ್ರಮದ ನಿಮಾರ್ಪಕರು ಮೊದಲ ಲುಕ್ ಬಿಡುಗಡೆ ಮಾಡಿದ್ದಾರೆ. ಬಿಗ್ಬಾಸ್ ಹಿಂದಿಯ 19 ಸೀಸನ್ ವಿಭಿನ್ನವಾಗಿದ್ದು, ಹೊಸ ಲೋಗೋ ವಿನ್ಯಾಸ ಬಿಡುಗಡೆ ಮಾಡಿದ್ದಾರೆ.
ಹಿಂದಿ ಬಿಗ್ ಬಾಸ್ ಕಾರ್ಯಕ್ರಮವು ಸಲ್ಮಾನ್ ಖಾನ್ ನೇತೃತ್ವದಲ್ಲಿ ಪ್ರಸಾರವಾಗಲಿದ್ದು, ಆಗಸ್ಟ್ 25 ರಂದು ಪ್ರಥಮ ಪ್ರದರ್ಶನ ಬರುವ ನಿರೀಕ್ಷೆಯಲ್ಲಿದೆ. ಈಗಾಗಲೇ ಹೊಸ ಲೋಗೋ ಕೂಡಾ ಬಿಡುಗಡೆ ಮಾಡಲಾಗಿದೆ.
ಬಿಗ್ಬಾಸ್ 19ರ ಥೀಮ್ ಏನು?
ಸುದ್ದಿ ಮೂಲಗಳ ಪ್ರಕಾರ, ಈ ಬಾರಿ ಶೋನ ಥೀಮ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇರಲಿದ್ದು, ಟೆಕ್ನಾಲಜಿಯ ಅಂಶಗಳನ್ನು ಒಳಗೊಂಡಿರಲಿದೆ. ಸ್ಪರ್ಧಿಗಳ ಪಾತ್ರ ಹೀಗಿರುವ ಸೀಸನ್ನಲ್ಲಿ ಬಹುಮುಖ್ಯವಾಗಿದ್ದು, ಎಲಿಮಿನೇಷ್ ಪ್ರೇಕ್ಷಕರಲ್ಲ, ಸ್ಪರ್ಧಿಗಳೇ ನಿರ್ಧಾರ ಮಾಡುವ ವ್ಯವಸ್ಥೆ ಇರಲಿದೆ. ಟಾಸ್ಕ್, ನಾಮನಿರ್ದೇಶನ ಹಾಗೂ ಪಡಿತರ ಹಂಚಿಕೆಯಲ್ಲೂ ಸ್ಪರ್ಧಿಗಳೇ ನಿರ್ಧಾರ ಕೈಗೊಳ್ಳಬೇಕಿದೆ.
ಬಿಗ್ಬಾಸ್ನಲ್ಲಿ ಯಾರು ಪಾಲ್ಗೊಳ್ಳಬಹುದು ?
ಇನ್ನು ಬಿಗ್ಬಾಸ್ ಪ್ರೀಮಿಯರ್ ದಿನಾಂಕದಂದು ಸ್ಪರ್ಧಿಗಳ ಅಂತಿಮಪಟ್ಟಿ ಬಿಡುಗಡೆಗಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿರುತ್ತಾರೆ. ಹಾಗೆ ಮೊದಲೇ ಕೆಲವೊಂದು ಸ್ಪರ್ಧಿಗಳ ಭಾಗವಹಿಸಬಹುದು ಎಂಬ ಊಹಾಪೋಹಗಳು ಸಾಮಾಜಿಕ ಜಾಲತಾಣಗಳಲ್ಲಿ ಹೊರಹೊಮ್ಮುತ್ತಿವೆ. ಬಿಗ್ಬಾಸ್ ತಂಡ 45 ಸೆಲೆಬ್ರೆಟಿಗಳನ್ನು ಸಂಪರ್ಕಿಸಿದೆ ಎಂದು ಮಾಹಿತಿ ಇದೆ. ಸ್ಪರ್ಧಿಗಳ ಪಟ್ಟಿಯಲ್ಲಿ ಯಾರಿದ್ದಾರೆ ಎನ್ನುವ ಮಾಹಿತಿಯನ್ನು ಬಿಗ್ ಬಾಸ್ ತಂಡವೇ ಅಧಿಕೃತವಾಗಿ ತಿಳಿಸಬೇಕಿದೆ.
ಬಿಗ್ಬಾಸ್ ಫ್ಯಾನ್ ಪೇಜ್ ತಾಜಾ ಖಬರ್ ಪ್ರಕಾರ ಬಿಬಿ ತಂಡ ದೂರದರ್ಶನ ವ್ಯಕ್ತಿಗಳು ಹಾಗೂ ಡಿಜಿಟಲ್ ಪ್ರಭಾವಿ ವ್ಯಕ್ತಿಗಳೊಂದಿಗೆ ಮಾತು ಕತೆ ನಡೆಸಿದ್ದಾರೆ. ಅದೇ ರೀತಿಯಲ್ಲಿ ರತಿ ಪಾಂಡೆ, ಹುನಾರ್ ಹಲಿ, ಅಪೂರ್ವ ಮುಖಿಜಾ , ಶ್ರೀ ಫೈಸು, ಧನಶ್ರೀ ವರ್ಮಾ, ಶ್ರೀರಾಮ್ ಚಂದ್ರ, ಮೀರಾ ಡಿಯೋಸ್ಥಾಲೆ ಮತ್ತು ಭಾವಿಕಾ ಶರ್ಮಾ ಹೆಸರುಗಳು ಕೇಳಿ ಬರುತ್ತಿದೆ. (ಏಜೆನ್ಸೀಸ್)