ನ್ಯೂಸ್

ಚಲಿಸುತ್ತಿದ್ದ ಬೈಕ್​ ಮೇಲೇ ಬಿದ್ದ ಮರ, ಬೈಕ್ ಬಹುತೇಕ ಜಖಂ!

ಕೊಡಗು: ಪ್ರತಿ ವರ್ಷವೂ ಒಂದಲ್ಲ ಒಂದು ಕಡೆ ಮಳೆ ಸಂದರ್ಭದಲ್ಲಿ ಚಲಿಸುತ್ತಿದ್ದ ವಾಹನಗಳ ಮೇಲೆ ಮರ ಬೀಳುವಂಥ ಪ್ರಕರಣಗಳು ನಡೆಯುತ್ತಿರುತ್ತವೆ. ಇಂದು ಕೂಡ ಚಲಿಸುತ್ತಿದ್ದ ಬೈಕ್​ವೊಂದರ ಮೇಲೆ ಮರ ಬಿದ್ದಿದ್ದು, ಬೈಕ್ ಅಪ್ಪಚ್ಚಿಯಾಗಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಐಗೂರಿನಲ್ಲಿ ಈ ಘಟನೆ ನಡೆದಿದೆ. ಮಡಿಕೇರಿ- ಸೋಮವಾರಪೇಟೆ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಮೇಲೇ ದೊಡ್ಡ ಮರವೊಂದು ಬಿದ್ದಿದೆ. ಕುಶಾಲನಗರ ನಿವಾಸಿ ಸುನಕ್ ಎಂಬವರು ಬೈಕ್ ಚಲಾಯಿಸುತ್ತಿದ್ದರು.

ಮರ ಬಿದ್ದ ಪರಿಣಾಮ ಬೈಕ್ ಬಹುತೇಕ ಜಖಂಗೊಂಡಿದೆ. ಆದರೆ ಅದೃಷ್ಟವಶಾತ್ ಸುನಕ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯಿಂದ ಪಾರಾಗಿದ್ದಾರೆ. ಸ್ಥಳೀಯರು ಕಾರ್ಯಾಚರಣೆ ನಡೆಸುವ ಮೂಲಕ ಮರವನ್ನು ತೆರವುಗೊಳಿಸಿದ್ದಾರೆ.