ಮುಂಬೈ: ಇಂದು ಆರಂಭವಾಗಲಿರುವ ಹಿಂದಿ ಬಿಗ್ ಬಾಸ್ 15ನೇ ಆವೃತ್ತಿಗಾಗಿ ಜಂಗಲ್ ಥೀಮ್ನ ಸೆಟ್ಟು ತಯಾರಾಗಿದೆ. ಬಿಗ್ ಬಾಸ್ ಮನೆಯ ಗಾರ್ಡನ್ ಪ್ರದೇಶವನ್ನು ಕಾಡಿನಂತೆ ಮಾರ್ಪಡಿಸಲಾಗಿದೆ. ಇದು ಈ ಸೀಸನ್ನ ಟ್ಯಾಗ್ಲೈನ್ 'ಸಂಕಟ್ ಇನ್ ಜಂಗಲ್, ಫೈಲಾಯೆಗಾ ದಂಗಲ್ ಪೆ ದಂಗಲ್'ಗೆ ಅನುರೂಪವಾಗಿದೆ ಎನ್ನಲಾಗಿದೆ.
ಹಸಿರು ಮರಗಿಡಗಳು ತುಂಬಿರುವ ಪ್ರದೇಶವನ್ನು ಬಳ್ಳಿಗಳು ಮತ್ತು ಕ್ಯಾಕ್ಟಸ್ ಗಿಡಗಳೊಂದಿಗೆ ಅಲಂಕರಿಸಲಾಗಿದೆ. ಒಂದು ಕೊಳವನ್ನು ಸೃಷ್ಟಿಸಿ ಅದರ ಮೇಲೆ ಸಣ್ಣ ಸೇತುವೆ ಕಟ್ಟಿದ್ದಾರೆ. ಜೊತೆಗೆ ಈ ಪ್ರದೇಶದಲ್ಲೇ ಒಂದು ರಹಸ್ಯ ಬಾಗಿಲನ್ನು ಕೂಡ ಮಾಡಲಾಗಿದೆ. ಈ ಸೆಟ್ಟನ್ನು ಒಮಂಗ್ ಕುಮಾರ್ ಅವರು ಪತ್ನಿ ವನಿತಾರ ಸಹಾಯದೊಂದಿಗೆ ಡಿಸೈನ್ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.
ಕಿಚನ್, ಬಾತ್ರೂಂ ಮತ್ತು ಎಂಟ್ರೆನ್ಸ್ ಎಲ್ಲೆಡೆ ಹಸಿರು ಬಳ್ಳಿಗಳು ಮತ್ತು ಹುಲ್ಲು ಆವರಿಸಿರುವುದನ್ನು ನೋಡಬಹುದು. ಜೊತೆಗೆ, ಪ್ರಾಣಿಗಳ ಕಲಾಕೃತಿಗಳು, ಚಿತ್ರಗಳು ಮತ್ತು ಹೂವಿನ ವಾಲ್ಪೇಪರ್ಗಳನ್ನು ಕಾಣಬಹುದಾಗಿದೆ. ಸಲ್ಮಾನ್ ಖಾನ್ ನಡೆಸಿಕೊಡಲಿರುವ ಈ ಬಿಗ್ ಬಾಸ್ ಶೋನ ಪ್ರೀಮಿಯರ್ಗೆ ಕೆಲವೇ ಗಂಟೆಗಳು ಉಳಿದಿದ್ದು, ನೋಡುಗರಲ್ಲಿ ಕುತೂಹಲ ತುಂಬಿದೆ. (ಏಜೆನ್ಸೀಸ್)