ವಾಷಿಂಗ್ಟನ್: ಹಮಾಸ್ ಒತ್ತೆಯಾಳಾಗಿದ್ದ ಅಮೆರಿಕಾ ಪ್ರಜೆ ಗಾಡಿ ಹಗ್ಗೈನನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ಬಂದಿದ್ದು, ಇದು "ಹೃದಯವಿದ್ರಾವಕ" ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.
ಹಗ್ಗೈ(73) ಹತ್ಯೆಗೆ ಬೈಡೆನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಈ ಸುದ್ದಿ ಕೇಳಿ ನಾನು ಹೃದಯಾಘಾತಗೊಂಡಿದ್ದೇನೆ. ಅವರ ಪತ್ನಿ ಜೂಡಿಯ ಸುರಕ್ಷಿತವಾಗಿ ಮರಳಲು ನಾವು ಪ್ರಾರ್ಥಿಸುತ್ತೇವೆ ಎಂದು ವೈಟ್ ಹೌಸ್ ನಿಂದ ಅಧ್ಯಕ್ಷರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಸ್ರೇಲಿ ಮಾಧ್ಯಮ ಹಾರೆಟ್ಜ್ ಪ್ರಕಾರ, ಹಗ್ಗೈ ಅವರ ಪತ್ನಿ ಜುಡಿತ್ ವೈನ್ಸ್ಟೈನ್ ಇನ್ನೂ ಗಾಜಾದಲ್ಲಿ ಒತ್ತೆಯಾಳಾಗಿದ್ದಾರೆ. ಬಿಡೆನ್ ಹೇಳಿಕೆಯು ಹಗ್ಗೈ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅ.7 ರಂದು ಇಸ್ರೇಲ್‌ನಲ್ಲಿ ಸಂಗೀತ ಉತ್ಸವದ ಮೇಲೆ ಹಮಾಸ್ ದಾಳಿ ಮಾಡಿ 1,200 ಜನರನ್ನು ಕೊಂದು, 240 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿತ್ತು. ಇದಕ್ಕೆ ಪ್ರತಿಕಾರವಾಗಿ ಇಸ್ರೇಲ್ ಗಾಜಾಪಟ್ಟಿ ಮೇಲೆ ದಾಳಿಗಳನ್ನು ನಡೆಸಿ 20ಸಾವಿರಕ್ಕೂ ಹೆಚ್ಚು ಜನರನ್ನು ಕೊಂದಿದೆ, ಇನ್ನೂ ಅನೇಕರು ಕಾಣೆಯಾಗಿದ್ದಾರೆ. ಹಲವರನ್ನು ಅವಶೇಷಗಳಡಿಯಲ್ಲಿ ಹೂಳಲಾಗಿದೆ. ಇಸ್ರೇಲ್ - ಪ್ಯಾಲೇಸ್ತೇನ್ ಯುದ್ಧವು 12 ನೇ ವಾರಕ್ಕೆ ಕಾಲಿಟ್ಟಿದ್ದು, ಒತ್ತೆಯಾಳುಗಳಿಗೆ "ಸಮಯ ಮೀರುತ್ತಿದೆ" ಎಂದುಹಮಾಸ್ ಎಚ್ಚರಿಸಿದೆ. ಇಸ್ರೇಲ್ ಯುದ್ಧ ನಿಲ್ಲಿಸುತ್ತಿಲ್ಲ. ಹೀಗಾಗಿ ಒತ್ತೆಯಾಳುಗಳಾಗಿರುವ ತನ್ನ ಪ್ರಜೆಗಳನ್ನು ರಕ್ಷಿಸಿಕೊಳ್ಳಲು ಅಮೆರಿಕಾ ಮತ್ತಿತರ ದೇಶಗಳು ಒತ್ತಡ ಹೇರುತ್ತಿವೆ.