More

    ಮಾನವ ಕಳ್ಳಸಾಗಣೆ ಶಂಕೆ: 303 ಮಂದಿ ಭಾರತೀಯರಿದ್ದ ವಿಮಾನ ಫ್ರಾನ್ಸ್​ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್!

    ಲಂಡನ್(23): ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನಿಂದ ನಿಕರಾಗುವಾಗೆ 303 ಭಾರತೀಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಫ್ರಾನ್ಸ್‌ನಲ್ಲಿ ‘ಮಾನವ ಕಳ್ಳಸಾಗಣೆ’ ಶಂಕೆಯ ಮೇರೆಗೆ ಇಳಿಸಲಾಯಿತು. ವಿಮಾನವನ್ನು ಫ್ರಾನ್ಸ್ ಅಧಿಕಾರಿಗಳು ವಶಕ್ಕೆ ತೆಗೆದು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಅಮೆರಿಕದಲ್ಲಿ ಹಿಂದೂ ದೇವಾಲಯವನ್ನು ಗುರಿಯಾಗಿಸಿಕೊಂಡ ಖಲಿಸ್ತಾನಿಗಳು; ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ
    ರೊಮೇನಿಯನ್ ಚಾರ್ಟರ್ ಕಂಪನಿಗೆ ಸೇರಿದ ಈ ವಿಮಾನ ದುಬೈ ವಿಮಾನ ನಿಲ್ದಾಣದಿಂದ ಹೊರಟಿತ್ತು. ಇದಾದ ಬಳಿಕ ಕೆಲ ತಾಂತ್ರಿಕ ಕಾರಣಗಳಿಂದ ಫ್ರಾನ್ಸ್ ನ ವಟ್ರಿಯಲ್ಲಿ ನಿಲ್ಲಿಸಲಾಗಿದೆ. ಅಷ್ಟರಲ್ಲಿ ಫ್ರೆಂಚ್ ಪೊಲೀಸರು ವಿಮಾನವನ್ನು ತಡೆದು ವಿಚಾರಣೆ ಆರಂಭಿಸಿದ್ದಾರೆ.

    ಫ್ರೆಂಚ್ ಪೋಲೀಸರು ವಿಮಾನದಲ್ಲಿದ್ದ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ವತ್ರಿಯಲ್ಲಿರುವ ಸ್ವಾಗತ ಹಾಲ್ ನಲ್ಲಿ ಪ್ರಯಾಣಿಕರರನ್ನು ಇರಿಸಿ ತನಿಖೆ ನಡೆಸಲಾಗುತ್ತಿದೆ. ತನಿಖೆ ಮುಗಿದ ನಂತರ ಎಲ್ಲವೂ ಸರಿಯಾಗಿದ್ದರೆ ಮಾತ್ರ ಇಲ್ಲಿಂದ ವಿಮಾನ ಟೇಕ್ ಆಫ್ ಆಗಲಿದೆ.

    ವಿಮಾನದಲ್ಲಿ ಮಾನವ ಕಳ್ಳಸಾಗಣೆ ಬಗ್ಗೆ ನಮಗೆ ಸುಳಿವು ಸಿಕ್ಕಿತ್ತು. ಹೀಗಾಗಿಯೇ ಗುರುವಾರ ರಾತ್ರಿ ತಡೆಹಿಡಿದು ತನಿಖೆ ನಡೆಸಲಾಗಿದೆ ಎಂದು ಪ್ಯಾರಿಸ್‌ನ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಕಚೇರಿ ತಿಳಿಸಿದೆ. ಪ್ರಯಾಣಿಕರು ಉಳಿಯಲು ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

    ವಿಶೇಷ ಫ್ರೆಂಚ್ ಸಂಘಟಿತ ಅಪರಾಧ ಘಟಕದ ತನಿಖಾಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಗೆ ‘ಲೆಜೆಂಡ್ ಏರ್‌ಲೈನ್ಸ್’ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

    ಮೂರು ಲೋಕಕ್ಕೂ ಖರ್ಗೆ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಿ; ಸಿಟಿ ರವಿ ವ್ಯಂಗ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts