ನ್ಯೂಸ್

ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸದ 'ಭೋಲಾ ಶಂಕರ್​' ಈಗ ಒಟಿಟಿಗೆ

ಮೋಹನ್​ ಶೆಟ್ಟಿ

ಆಂಧ್ರಪ್ರದೇಶ: ನಿರ್ದೇಶಕ ಮೇಕರ್ ಮೆಹರ್ ರಮೇಶ್ ಮತ್ತು ಟಾಲಿವುಡ್​ನ ಮೆಗಾಸ್ಟಾರ್, ಹಿರಿಯ ನಟ ಚಿರಂಜೀವಿ ಅಭಿನಯದ 'ಭೋಲಾ ಶಂಕರ್' ಬಾಕ್ಸ್ ಆಫೀಸ್​ನಲ್ಲಿ ನಿರೀಕ್ಷಿಸಿದಂತೆ ಕಲೆಕ್ಷನ್​ ಮಾಡದೆ, ಚಿತ್ರಮಂದಿರಗಳ ಪ್ರದರ್ಶನಗಳಲ್ಲಿ ಭಾರೀ ಹಿನ್ನಡೆಯನ್ನು ಅನುಭವಿಸಿತು. ಇದೀಗ ಸಿನಿಮಾದ ಒಟಿಟಿ ಬಿಡುಗಡೆ ಪ್ರಕಟಗೊಂಡಿದ್ದು, ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮಿಂಗ್​ಗೆ ಲಭ್ಯವಿದೆ.

ಅಜಿತ್ ಅಭಿನಯದ ಬ್ಲಾಕ್​ಬಸ್ಟರ್ 'ವೇದಾಲಂ'ನ ರಿಮೇಕ್ 'ಭೋಲಾ ಶಂಕರ್' ಸಿನಿಮಾ, ಚಿತ್ರ ರಸಿಕರಿಂದ ಕಳಪೆ ವಿಮರ್ಶೆಗಳನ್ನು ಪಡೆದುಕೊಳ್ಳುವುದರ ಜತೆಗೆ ಬಾಕ್ಸ್​ ಆಫೀಸ್​ನಲ್ಲಿ ಅತೀ ಕಡಿಮೆ ಗಳಿಕೆಯನ್ನು ಕಂಡಿತು. ಈ ಸಂಗತಿ ಮೆಗಾಸ್ಟಾರ್​ ಅಭಿಮಾನಿಗಳಿಗೆ ತೀವ್ರ ಬೇಸರವನ್ನು ಉಂಟು ಮಾಡಿದ್ದು, ಸಿನಿಮಾದ ಒಟಿಟಿ ರಿಲೀಸ್ ಕೊಂಚ ಸಂತಸ ಮೂಡಿಸಿದೆ.

ನೆಟ್‌ಫ್ಲಿಕ್ಸ್‌ಗೆ ಲಗ್ಗೆಯಿಟ್ಟ 'ಭೋಲಾ ಶಂಕರ್'​, ಇಂಗ್ಲಿಷ್ ಉಪ ಶೀರ್ಷಿಕೆಯೊಂದಿಗೆ ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ತಮಿಳು ಮತ್ತು ಮಲಯಾಳಂ ಆವೃತ್ತಿಗಳು ಕೂಡ ಶೀಘ್ರದಲ್ಲೇ ಬರಲಿದೆ ಎಂಬ ಮಾಹಿತಿ ದೊರೆತಿದೆ. ಚಿತ್ರದಲ್ಲಿ ತಮನ್ನಾ ಭಾಟಿಯಾ, ಕೀರ್ತಿ ಸುರೇಶ್, ಗೆಟಪ್ ಶ್ರೀನು, ಮುರಳಿ ಶರ್ಮಾ, ವೆನ್ನೆಲ ಕಿಶೋರ್, ಶ್ರೀಮುಖಿ, ರಶ್ಮಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ,(ಏಜೆನ್ಸೀಸ್).