ನವದೆಹಲಿ: ಮಾಜಿ ಪ್ರಧಾನಿ ದಿ. ಪಿವಿ ನರಸಿಂಹ ರಾವ್ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ಘೋಷಿಸಿರುವುದನ್ನು ಸ್ವಾಗತಿಸಿರುವ ಅವರ ಮೊಮ್ಮಗ ಎನ್.ವಿ. ಸುಭಾಷ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದೊಂದು ಭಾವನಾತ್ಮಕ ಕ್ಷಣವಾಗಿದ್ದು, ಕೇಂದ್ರ ಸರ್ಕಾರ ನಮ್ಮ ತಾತನವರಿಗೆ ಭಾರತ ರತ್ನ ನೀಡಿ ಗೌರವಿಸಿದೆ. ಆದರೆ, ಕಾಂಗ್ರೆಸ್ನವರ ರೀತಿ ತಮ್ಮ ವೈಫಲ್ಯಗಳಿಗೆ ಬಲಿಪಶುವನ್ನಾಗಿಸಲಿಲ್ಲ ಎಂದು ಕಿಡಿಕಾರಿದ್ದಾರೆ.
ಕಾಂಗ್ರೆಸ್ ತಮ್ಮ ಪಕ್ಷದ ವೈಫಲ್ಯಗಳಿಗೆ ರಾವ್ ಅವರನ್ನು ಬಲಿಪಶುವನ್ನಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಮ್ಮ ತಾತನವರು ಕಾಂಗ್ರೆಸ್ ಪಕ್ಷದಲ್ಲಿ ಇದ್ದರೂ ಸಹ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅವರಿಗೆ ಭಾರತ ರತ್ನ ನೀಡುವ ಮೂಲಕ ಗೌರವಿಸಿದೆ. ಈ ವಿಚಾರದಲ್ಲಿ ನಾನು ಯುಪಿಎ ಹಾಗೂ ಗಾಂಧಿ ಕುಟುಂಬವನ್ನು ಸಂಪೂರ್ಣವಾಗಿ ದೂಷಿಸುತ್ತೇನೆ.
ನರೇಂದ್ರ ಮೋದಿಯವರು ರಾಷ್ಟ್ರೀಯ ನಾಯಕರಾಗಿ ಮತ್ತು ಇಡೀ ಪ್ರಪಂಚದ ನಾಯಕರಾಗಿ, ಇತರ ನಾಯಕರನ್ನು ನಿರಂತರವಾಗಿ ಗುರುತಿಸುತ್ತಿರುವ ಈ ನಿರ್ಣಾಯಕ ಘಟ್ಟದಲ್ಲಿ ಇದು ಹೆಮ್ಮೆ, ಇದು ನಮಗೆ ಗೌರವ ಎಂದು ನಾನು ಭಾವಿಸುತ್ತೇನೆ. ಈ ಸಮಯದಲ್ಲಿ ಭಾವುಕನಾಗಿದ್ದೇನೆ. ಏಕೆಂದರೆ ಭಾರತ ರತ್ನ ಪ್ರಶಸ್ತಿ ವಿಳಂಬವಾಗುತ್ತದೆ ಎಂದು ನಾವು ನಿರೀಕ್ಷಿಸಿದ್ದೆವು ಎಂದು ಹೇಳಿದ್ದಾರೆ.