ನವದೆಹಲಿ: ಸಂಸತ್ ಅಂಗೀಕರಿಸಿದ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ಮತ್ತು ಕನಿಷ್ಠ ಬೆಂಬಲ ಬೆಲೆಯನ್ನು ಆಗ್ರಹಿಸಿ ಕೆಲವು ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಶುಕ್ರವಾರ ಬೆಳಗ್ಗೆ ಆರಂಭವಾಗಿದೆ. ಉತ್ತರ ಭಾರತದಲ್ಲಿ ಬಂದ್ನ ತೀವ್ರತೆ ಹೆಚ್ಚಿದ್ದು, ದಕ್ಷಿಣ ಭಾರತದಲ್ಲಿ ಅಲ್ಲಲ್ಲಿ ಪ್ರತಿಭಟನೆಗಳು ವ್ಯಕ್ತವಾಗಿದೆ.
ಆಲ್ ಇಂಡಿಯಾ ಫಾರ್ಮರ್ಸ್ ಯೂನಿಯನ್ (ಎಐಎಫ್ಯು), ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು), ಆಲ್ ಇಂಡಿಯಾ ಕಿಸಾನ್ ಮಹಾಸಂಘ್ (ಎಐಕೆಎಂ), ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕೋ ಆರ್ಡಿನೇಶನ್ ಕಮಿಟಿ (ಎಐಕೆಎಸ್ಸಿಸಿ) ಮತ್ತು ಇತರೆ ರಾಜಕೀಯ ಪಕ್ಷ ಬೆಂಬಲಿತ ಸಂಘಟನೆಗಳು ಪ್ರತಿಭಟನಾ ರಾಲಿ, ಜಾಥಾಗಳನ್ನು ಹಮ್ಮಿಕೊಳ್ಳಲು ಕರೆ ನೀಡಿವೆ.
ಇದನ್ನೂ ಓದಿ: ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ
ಪಂಜಾಬ್ನಲ್ಲಿ ಕಿಸಾನ್ ಮಜ್ದೂರ್ ಸಂಘರ್ಷ ಕಮಿಟಿ ಅಮೃತಸರದಲ್ಲಿ ರೈಲ್ ರೋಕೊ ಪ್ರತಿಭಟನೆ ನಡೆಸಿದೆ.
ಪಟನಾದಲ್ಲಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಟ್ರ್ಯಾಕ್ಟರ್ ಚಲಾಯಿಸುತ್ತ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
ತಮಿಳುನಾಡಿನಲ್ಲಿ ರೈತರ ಪ್ರತಿಭಟನೆ ಹೀಗಿತ್ತು..